ಲಾಲ್ ಭಾಗ್ ಗೆ
ಬೆಳಗ್ಗೆ ಯಾವಾಗಾದ್ರೂ ಹೋಗಿದೀರಾ, ಲೈಕ್ ಅರ್ಲಿ ಮಾರ್ನಿಂಗ್, ಸನ್ ರೈಸ್ ಟೈಮ್ ಅಲ್ಲಿ. ನೆನ್ನೆ(೧೧.
೩. ೨೦೧೭) ಬೆಳಗ್ಗೆ ಹೋಗಿದ್ದೆ ಜೋಗ್ ಮಾಡಕ್ಕೆ ಫೈವ್ ಥರ್ಟಿ ಹಂಗೆ. ಓದ್ಕೊಂಡ್ ಲೇಕ್ ಪಕ್ಕ ಬೆಂಚ್
ಮೇಲೆ ಕೂತ್ಕೊಂಡೆ, ಟೈಮ್ ಸುಮಾರು ೬.೩೦ ಆಗಿತ್ತು ಅನ್ಸತ್ತೆ. ಸಾಕಷ್ಟು ಜನ ಇದ್ರೂ ಬಟ್ ನಂಗೆ ಜನ
ಇಲ್ದೆ ಲಾಲ್ ಭಾಗ್ ಹೆಂಗೆ ಇರ ಬಹುದು ಅಂತ ಇಮ್ಯಾಜಿನ್ ಮಾಡೋ ಆಸೆ ಬಂತು ಅದಕ್ಕೆ ಆಕಾಶದ ಬ್ಯಾಕ್ ಗ್ರೌಂಡ್
ನಲ್ಲಿ ಮರಗಳನ್ನ ನೋಡತ ಕೂತ್ಕೊಂಡೆ. ಹಂಗೆ ಇಮ್ಯಾಜಿನೇಶನ್, ಲಾಲ್ ಭಾಗ್ ಕ್ರಿಯೇಷನ್ ಟೈಮ್ ಗೆ ಹೋಯಿತು,
ಸ್ವಲ್ಪ ಹಿಸ್ಟರಿ ಗೊತ್ತಿರೋದ್ರಿಂದ easy ಆಯಿತು ಇಮ್ಯಾಜಿನ್ ಮಾಡೋದು, ಟಿಪ್ಪು ಮತ್ತೆ ಹೈದರ್ ಅಲಿ
ಟೈಮ್ ಆಲ್ ಅಂತೆ ಲಾಲ್ ಭಾಗ್ ಆಗಿದ್ದು. ತಿಗಳರು ಅನ್ನೋ ಕಮ್ಯೂನಿಟಿ ಅವರ ಕೈ ನಲ್ಲಿ ಮಡ್ಸಿರೋದ್ ಅಂತೆ.
ಆ ಟೈಮ್ ಅಲ್ಲೂ ಆ ಕೆರೆ ಪಕ್ಕ ಚಿಕ್ಕ ಚಿಕ್ಕ ಕುಟುಂಬಗಳು ಬಿಡಾರ ಹೂಡಿಕೊಂಡಿದ್ವು ಅನ್ಸತ್ತೆ ಬಟ್ಟೆ
ಪಾತ್ರೆ ತೊಳ್ಕೊಂಡಿದ್ವು ಅನ್ಸತ್ತೆ ಈಗ buldozer
ಗಳಿಂದ ಖಾಲಿ ಮಾಡಿಸ್ತಾರೆ ಆಗ ಆನೆ ಗಳನ್ನ ಕರ್ಕೊಂಡ್ ಹೆದರಿಸಿ ಓಡ್ಸಿದ್ರು ಅನ್ಸತ್ತೆ. ಎನಿವೇ
ಕ್ಲಿಯರ್ ಆಗಿ ಏನ್ ಆಯಿತು ಅಂತ ಗೊತ್ತಿಲ್ಲ ಅದನ್ನ ಅಲ್ಲಿ ಬಿಡಣ. ಹಂಗೆ ನನ್ ಇಮ್ಯಾಜಿನೇಷನ್ ಅಲ್ಲಿ
ಸುತ್ತ ಇರೋ ಜನರನ್ನ ಮಾರಿತ ಇದ್ದ ಹಾಗೆ ಕಲ್ಪನೆ ನಲ್ಲಿ ಒಂದ್ ಮರದಿಂದ ಯಾರೋ ವಯಸಾದ ವ್ಯಕ್ತಿ ಹೊರಗೆ
ಬಂದ ಹಾಗೆ ಆಯಿತು ನಾನು ಹಂಗೆ, ಅವನನ್ನ ಕಲ್ಪನೆ ಅಲ್ಲಿ ನೋಡತಾ ಇದ್ದೆ, ಹೊರಗ್ ಬಂದ ಕೆರೆ ಇಂದ ನೀರು
ತೆಗದು ಮರಕ್ಕೆ ಹಾಕ್ದಆಮೇಲೆ ಅಲ್ಲೇ ಬೆಂಚ್ ಮೇಲೆ ಕೂತ್ಕೊಂಡ.
ಅಲ್ಲಿಂದ ನಂಗೆ
ಇನ್ನೊಂದ್ ಕಲ್ಪನೆ, alternate ಯೂನಿವರ್ಸ್ ಅಂತೆಲ್ಲ ಮಾತಾಡ್ತಾರಲ್ಲ ಹಾಗೆ ಒಂದ್ alternate ಯೂನಿವರ್ಸ್
ಯಾಕ್ ಇರ ಬರ್ದು. ಪ್ರತಿ ಮರಕ್ಕೂ ಒಬ್ಬ ವ್ಯಕ್ತಿ ಥರ. ಮರಗಳಿಗೆ ಓಡಾಡೋಕ್ಕೆ ಆಗ್ದೇ ಇರೋ ಕರಣ ಮರಗಳಿಗೆ
ಬೇಕಾದ ನೀರು ಮುಂತಾದವನ್ನ ಆ ವ್ಯಕ್ತಿ ಪೂರೈಸೋ ಥರ. ನಮಗೆ ಸೈನ್ಸ್ ಚೆನ್ನಾಗ್ ಗೊತ್ತು ಬಹುಶ ಈ ಥಿಯರಿ
ನ ರಾಂಗ್ ಅನ್ಬಹುದು ಆದ್ರೆ ಸೈನ್ಸ್ ಗೊತ್ತಿಲ್ದೆ ಇರುವವರಿಗೆ ಇದೆ ಸತ್ಯದ ಥರ ಕಾಣ್ಸ್ ಬಹುದಲ್ಲ?
ಇದೆ ಇಮ್ಯಾಜಿನೇಶನ್
ಕಂಟಿನ್ಯೂ ಮಾಡ್ತಾ ಒಂದು ಚಿಕ್ಕ ಕಥೆ ಹೊಳೀತು ಹೇಳ್ತಿನಿ ನೋಡಿ.
ಈ ಕಥೇಲಿ ನಾನೂ
ಒಂದು ಕ್ಯಾರೆಕ್ಟರ್, ನಂದೇ ಪಾಯಿಂಟ್ ಒಫ್ ವ್ಯೂ ಇಂದ ನರೇಟ್ ಮಾಡಿದೀನಿ ಹಾಗಂತ ನಿಜ ಅನ್ಕೋಬೇಡಿ
...
ನಾನು ಕೋನ್ಸೆಲ್ಲಿಂಗ್
ಮಾಡಕ್ಕೆ ಶುರು ಮಾಡಿದ್ ಹೊಸದ್ರಲ್ಲಿ ಒಂದು ಕೇಸ್ ಬಂತು. ಎರೆಡು ಮೂರು ಕೇಸ್ ಆಗಿತ್ತು ಆವತ್ತು. ಇನ್ನು
ಮನೆಗೆ ಹೋಗೋ ಟೈಮ್ ಅಲ್ಲಿ ಒಂದು ಕೇಸ್ ಬಂತು ಒಬ್ಬನೇ ಬಂದಿದ್ದ. ಮೇಲ್ನೋಟಕ್ಕೆ ಅವನಲ್ಲಿ ಏನ್ ತೊಂದ್ರೆ
ನು ಕಾಣಸ್ತಾ ಇರ್ಲಿಲ್ಲ ಮುಗುಳ್ನಗೆ ಇತ್ತು ಮುಖದಲ್ಲಿ ನಿಷ್ಚಿಂತೆ ಇತ್ತು ಬಹುಶ ಬೇರೆ ಯಾರಿಗೋ ಕೌಂಸೆಲ್ಲಿಂಗ್
suggest ಮಾಡೋಕ್ಕೆ ಬಂದಿರ ಬಹುದು ಅಂತ ಅನ್ಕೊಂಡೆ. ನನ್ನ ಮತ್ತು ಅವನ ಸಂಭಾಷಣೆ ಈ ರೀತಿ ಇತ್ತು.
ನಾನು : ಹಲೋ
ಹೇಗಿದೀರಾ? ನನ್ನ ಹೆಸರು ನಾಗಭೂಷಣ್, ನಿಮ್ ಹೆಸರು ಏನೋ ಅಂತ ತಿಳ್ಕೊ ಬಹುದಾ ?
ಅವನು : ಡಾಕ್ಟರ್
ನಾನು ಎಷ್ವಾಂತ್ ಅಂತ. ಆರಂ ಆಗಿದ್ದೀನಿ
ನಾನು : ಎಷ್ವಾಂತ್
ಡಾಕ್ಟರ್ ಅಂತ ಕರಿ ಬೇಡಿ ಪ್ಲೀಸ್, ಐ ಆಮ್ ನಾಟ್ ಆ ಮೆಡಿಕಲ್ ಡಾಕ್ಟರ್. ನಾಗಭೂಷಣ್ ಅಂತ ಕರೀರಿ, ಐ
would ಲೈಕ್ ಟು ಬಿ ಲೈಕ್ ಯುವರ್ ಫ್ರೆಂಡ್, ಇಫ್ ಯು ವಾಂಟ್ ಮೀ ಟು ಬಿ, ಬಟ್.
ಎಷ್ವಾಂತ್ :
ಸಾರೀ ನಾಗಭೂಷಣ್ ಗ್ರೇಟ್, ಯಸ್ ನಂಗು ಕೂಡ ನಿಮ್ಮನ್ನ ಫ್ರೆಂಡ್ ಅಂತ ನೇ ಕನ್ಸಿಡರ್ ಮಾಡ್ ಬೇಕು ಅಂತ
ಇತ್ತು ಆದರೆ ಕೌಂಸೆಲ್ಲಿಂಗ್ ಅನುಭವ ನಂಗೆ ಫಸ್ಟ್ ಟೈಮ್ ಹಾಗಾಗಿ ಫಾರ್ಮಲ್ ಆಗಿ ಬಿಹೇವ್ ಮಾಡಿದೆ.
ನಾನು : ನೋ ಪ್ರಾಬ್ಲಮ್,
ಹೌದು ಫ್ರೆಂಡ್ ಅಂತ ಕನ್ಸಿಡರ್ ಮಾಡಬೇಕು ಅಂದ್ರಲ್ಲ ಖುಷಿ ಆಯಿತು. ಹೇಳಿ ಈ ಫ್ರೆಂಡ್ ಯಾವ ಥರ ಸಹಾಯ
ಮಾಡ ಬಹುದು.
ಎಷ್ವಾಂತ್ :
ನಾಗಭೂಷಣ್, ಪ್ರಾಬ್ಲಮ್ ಇರೋದು ನಂಗೇನೇ. ಮೇಲ್ನೋಟಕ್ಕೆ ನಂಗು ಅನ್ಸತ್ತೆ ಆರಾಮಾಗ್ ಇದೇನ್ ಅಲ್ಲ ಈ
ಪ್ರಾಬ್ಲಮ್ ನ ಇಟ್ಕೊಂಡು ಸುಮ್ನೆ ಈದ್ ಬಿಡಣ ಅಂತ, ಆದ್ರೆ ಒಳಗಿಂದ ಎಲ್ಲೋ ನನಗೆ ಹುಚ್ಚ ಅಂತ ಭಯ ಕಾಡತ್ತೆ.
ನನ್ ಫ್ರೆಂಡ್ಸ್ ಗೆ ಹೇಳ್ಕೊಂಡ್ರೆ ಖಂಡಿತಾ ನನಗೆ ಹುಚ್ಚು ಅಂತಾರೆ. ಆದ್ರೆ ಎಷ್ಟ್ ದಿನ ಅಂತ ಈ ಸೀಕ್ರೆಟ್
ನ ಮನಸಲ್ಲಿ ಇಟ್ಕೊಂಡ್ ಇರ್ಲಿ. ನಂಗು ಸಾಕಾಯಿತು. ತುಂಬ ಯೋಚನೆ ಮಾಡಿದೆ ಆದ್ರೆ ಇದರಿಂದ ಹೊರಗ್ ಬರೋ
ದಾರಿ ನೇ ಹೊಳೀತಿಲ್ಲ.
ನಾನು : ಏನ್
ಪ್ರಾಬ್ಲಮ್ ಹೇಳಿ ಎಷ್ವಾಂತ್. ಎಲ್ಲ ಪ್ರಾಬ್ಲಮ್ ಗು ಸೊಲ್ಯೂಷನ್ ಇರತ್ತೆ. ಪ್ರಾಬ್ಲಮ್ ಅಲ್ಲಿ ಸಿಗ್
ಹಾಕೊಂಡಾಗ ಕಾಣಲ್ಲ ಅಷ್ಟೇ. ಆ ಪ್ರಾಬ್ಲಮ್ ಇಂದ ಹೊರಗ್ ಬಂದಾಗ ಸ್ಪಷ್ಟ ಆಗತ್ತೆ. ಹೇಳಿ ವೀ ವಿಲ್ ಸಿಟ್
togather ಅಂಡ್ solve ಇಟ್.
ಎಷ್ವಾಂತ್ :
ಥಾಂಕ್ ಯು ಫಾರ್ ಯುವರ್ ಕಾನ್ಫಿಡೆನ್ಸ್.
ಎಷ್ವಾಂತ್ ತನ್ನ
ಕಥೇನ ಬಿಚ್ಚಿಡ್ತಾನೆ ..
"ನಂಗೆ
ಚಿಕ್ ವಯಸ್ಸಿನಿನ್ದಾನು ಮರ ಗಿಡಗಳ ಮೇಲೆ ತುಂಬ ಪ್ರೀತಿ, ನಮ್ಮ ಮನೇಲಿ ಇರೋ ಕೈತೋಟ ನ ತುಂಬ ಚೆನ್ನಾಗಿ
ನೋಡ್ಕೋತಾ ಇದ್ದೆ, ಸ್ಕೂಲ್ ಕಾಲೇಜು ಅಲ್ಲೆಲ್ಲ ವನಮಹೋತ್ಸವ ಅಂತ ಕಾರ್ಯಕ್ರಮ ಆಯೋಜಿಸ್ತಾ ಇದ್ದೆ.
ನಮ ಸ್ಕೂಲ್ ಸುತ್ತ ಸಾಕಷ್ಟು ಮರ ನೆಟ್ಟಿದೀನಿ.
ಅದರ ಪಾಡಿಗೆ
ಅದು ನಡೀತಾ ಇತ್ತು ನನ್ ಪಾಡಿಗೆ ನಾನು ಓದ್ಕೊಂಡ್ ಆರಂ ಆಗಿ ಇದ್ದೆ. ಡಿಗ್ರಿ ಆಗಿ ಕೆಲಸ ಸೇರ್ಕೊಂಡ್
ಮೇಲೆ ಒಂದು organisation ಸೇರ್ಕೊಂಡೆ 'ಯೂಥ್ ಫಾರ್ ಸೇವಾ' ಅಂತ. ಅವರಲ್ಲಿ ಒಂದು ಪ್ರೋಗ್ರಾಮ್ ಇತ್ತು
'ಅಡಾಪ್ಟ್ ಆ ಟ್ರೀ' ಅಂತ ಅದರ ಪ್ರಕಾರ ನಾವ್ಗಳು ಒಂದು ಮರ ನ ನೆಟ್ಟಿ ಅದು ದೊಡ್ಡದು ಆಗೋ ತನಕ ಅದನ್ನ
ನೋಡ್ಕೋಬೇಕು.
ಎಲ್ಲರು ಅವರ
ಅವರಿಗೆ ಅನುಕೂಲ ಆಗೋ ಹಾಗೆ ಮರ ನೆಟ್ಟಿ ಕೊಂಡರು. ನಂಗೆ ಒಂದು ಹುಚ್ಚು ಸ್ವಲ್ಪ ಡಿಫರೆಂಟ್ ಆಗಿ ಏನೋ
ಟ್ರೈ ಮಾಡಣ ಅನ್ಕೊಂಡೆ ಲಾಲ್ ಭಾಗ್ ಸರ್ಕಲ್ ಹತ್ರ ಒಂದು ಒಂಟಿ ಮರ ಇದೆ ನೋಡಿರ್ತಿರಾ ಒಬ್ಸರ್ವ್ ಮಾಡಿರಲ್ಲ
ನೀವು. ಆ ಮರ ಯಾಕೆ ಒಂಟಿ ಆಗಿರ್ಬೇಕು ಅದಕ್ಕೆ ಒಂದು ಜೋಡಿ ಮಾಡಣ ಅಂತ ಆ ಮರದ ಪಕ್ಕದಲ್ಲಿ ಒಂದು ಮರ
ನೆಟ್ಟೆ. ತುಂಬ ಚೆನ್ನಾಗಿ ನೋಡ್ಕೊಂಡೆ ವಿಥಿನ್ ೨ ಇಯರ್ಸ್ ಮರ ಬೆಳಿತಾ ಆಲ್ಮೋಸ್ಟ್ ವಾರಕ್ಕೆ ಒಂದು
ಎರಡ್ ಸಲ ಹೋಗಿ ಗೊಬ್ಬರ ಹಾಕೋದು ಅದ್ ಎಲ್ಲ ಮಾಡ್ತಾ ಇದ್ದೆ.
ಹೀಗೆ ನಡೀತಿರುವಾಗ
ಒಂದ್ ದಿನ ಬೆಳಗಿನ ಜಾವಾ ಎದ್ದು ನನ್ನ ರೂಮ್ ಡೆಸ್ಕ್ ಹತ್ತಿರ ಹೋದೆ ಅದರ ಮೇಲೆ ಒಂದ್ ಲೆಟರ್ ಇತ್ತು,
ಪೇಪರ್ ಒಂಥರಾ ಎಲ್ಲೋವಿಶ್ ಆಗಿತ್ತು ಪ್ಯೂರ್ ವೈಟ್ ಪೇಪರ್ ಅಲ್ಲ ಅದು. ತೆಗೆದು ಓದಿದೆ, ಈ ತರ ಇತ್ತು ..
"ನಿಮ್ಮ
ಗಿಡದ ಮೇಲಿನ ಕಾಳಜಿ ನಂಗೆ ತುಂಬ ಇಷ್ಟ ಆಯಿತು, ನನ್ ಹೆಸರು ಮಾರ, ಗಿಡಗಳ ಹಾಗೆ ಗಿಡದವರ್ನು ಸಹಾಯ
ಮಾಡತೀರಾ ಅನ್ಕೊಂಡಿದೀನಿ, ಗಿಡದವ್ರು ಅಂದ್ರೆ ಯಾರು ಅಂತ ಅನ್ಕೊಂಡ್ರಾ, ಹೌದು ನಾವು ನಿಮ್ ಜನ ಅಲ್ಲ,
ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳೋ ಜನ ಅಲ್ಲ, ನಾವು ಗಿಡದವ್ರು ಗಿಡಗಳಿಗೆ ಮಾತ್ರ ಕಂಸ್ಕೊತೀವಿ, ನಮ್ಮ
ಜೀವನ ಗಿಡಗಳಿಗೆ ಮುಡಿಪು, ನಮ್ಮ ಹುಟ್ಟಿನಿಂದ ಸಾವಿನ ತನಕ ನಮಗೆ ಒಂದು ಮರ ಅಂತ ಗೊತ್ತು ಮಾಡಿರ್ತರೇ
ಅದನ್ನ ಕಣ್ಣಿನ ತರ ನೋಡ್ಕೊಳೋದೆ ನಮ್ಮ ಕೆಲಸ, ಇದನ್ನ ನೀವು ಯಾರೋ ಮಾಡ್ತಿರೋ ಚೇಷ್ಟೆ ಅನ್ಕೋ ಬಹುದು.
ಸ್ವಲ್ಪ ಹೊತ್ತು ಅಂದುಕೊಳ್ಳಿ ಪರ್ವಾಗಿಲ್ಲ ಆದ್ರೆ ಪಕ್ಕದ ಚೀಟಿಲಿ ಒಂದು ಮಂತ್ರ ಬರ್ದಿದಿನಿ ಅದನ್ನ
ಹೇಳ್ ನೋಡಿ ಗೊತ್ತಾಗತ್ತೆ ನೀವು ನಮ್ ಜನ ಆಗತೀರ, ಅಯ್ಯೋ ಆಮೇಲೆ ಏನು ಅಂತ ಭಯಾನ, ಭಯ ಪಡ್ಬೇಡಿ ಮತ್ತೆ
ಆ ಮಂತ್ರ ಹೇಳಿ ನಿಮ್ ಲೋಕಕ್ಕೆ ಮತ್ತೆ ಹೋಗತೀರ. ಆದ್ರೆ ಒಂದು ನೆನ್ಪ್ ಇಡೀ, ಈ ಮಂತ್ರ ನೀವು ಬೇರೆ
ಅವರಿಗೆ ಹೇಳಿದ್ರೆ ಖಾಯಂ ನಮ್ ಲೋಕಕ್ಕೆ ಬಂದು ಬಿಡತೀರಾ"
ಪಾತ್ರವನ್ನು
narrate ಮಾಡೋದು ನಿಲ್ಲಿಸಿ ಸ್ವಲ್ಪ ನೀರು ಇದ್ದೀಯ ಅಂತ ಎಷ್ವಾಂತ್ ಕೇಳ್ದ. ನೀರು ಕುಡಿದ ಮೇಲೆ ನನ್ನ
ಕಡೆ ತಿರುಗಿ.
ಎಷ್ವಾಂತ್ ನನ್ನನ
ಉದ್ದೇಶಿಸಿ : ಶಾಕ್ ಐತ ನಾಗಭೂಷಣ್, ಇವನು ಯಾರೋ ಹುಚ್ಚ ಅನ್ಕೋತ ಇದ್ದೀರಾ ಅಲ್ವಾ. ಇದೆ ಭಯದಿಂದ ನಾನು
ಈ ರಹಸ್ಯನ ಮುಚ್ಚಿ ಇಡುತ್ತಿದ್ದೆ
ನಾನು : ಇಲ್ಲ
ಎಷ್ವಾಂತ್. ನಮ್ ನಡುವೆ ಏನ್ ಎಲ್ಲ possibility ಇದೆ, ಎಷ್ಟೋ ಪವಾಡಗಳು ನಡೆದಿರುತ್ತದೆ, ದೇವರನ್ನ
ನಂಬವರು ನಾವು ಇದನ್ನ ಸುಳ್ಳು ಅಂತ ಹೇಳೋ ಪ್ರೂಫ್ ನಂಗೆ ಇನ್ನು ಸಿಕ್ಕಿಲ್ಲ ನೀವು ಹೇಳಿ ನಾನು ಮುಕ್ತ
ವಾಗಿ ಕೇಳ್ತೀನಿ
(ನನ್ನ ಮನಸಲ್ಲಿ,
ಈದ್ ಎಂಥ ಕಥೆ ಮಾರಾಯ, ಇವ್ನು hallucinate ಮಾಡ್ಕೋತೀರಾ ಬಹುದಾ, ಇಲ್ಲ ಸುಮ್ನೆ ಕಥೆ ಕಟ್ಟಿದಾನ,
ಮಂತ್ರ ಹೇಳು ಅಂತ ಅನ್ನೋ ಹಾಗ್ ಇಲ್ಲ, ಏನೋ ನೋಡಣ, ಏನ್ ಆದರು ವೀಕ್ ಪಾಯಿಂಟ್ ಬಿಟ್ ಕೊಡ ಬಹುದು
)
ಎಷ್ವಾಂತ್ :
ನಂಗು ಇದು ನನ್ನ brahme ಅನ್ಸಿತ್ತು ಆದ್ರೆ ಸುತ್ತ ಮುತ್ತ ಎಲ್ಲ ಸತ್ಯ. ಯಾರೋ ಪ್ರಾಂಕ್ ಮಾಡಿರ ಬಹುದು
ಅನ್ಕೊಂಡೆ ಆದ್ರೆ ಆ ಮಂತ್ರ ಹೇಳಿದ್ ಮೇಲೆ ಆದ ಅನುಭವ ...
ಒಂದಿಷ್ಟು ಘಳಿಗೆಯ
ಮೌನದ ನಂತರ ..
ಎಷ್ವಾಂತ್ ಕಂಟಿನ್ಯೂ
ಮಾಡಿದ,
...ಮಂತ್ರ ಹೇಳಿ
ಕಣ್ಣು ಮುಚ್ಚಿ ತೆಗೆಯೋ ಅಷ್ಟ್ರಲ್ಲಿ, ಲಾಲ್ ಭಾಗ್ ಹತ್ರ ನಾನು ನೆಟ್ಟ ಮರದ ಹತ್ತಿರ ಒಂದು ಬೆಂಚಿನ
ಮೇಲೆ ಕೂತಿದ್ದೆ. ಪಕ್ಕದಲ್ಲಿ ನಂದೇ ವಯಸ್ಸಿನ ಒಂದು ಹುಡುಗ ಕೂತಿದ್ದ. ಗೋದಿ ಬಣ್ಣ ಮುಖದ ಮೇಲೆ ನಿಮ್
ಮುಖದ ಮೇಲೆ ಇರೋ ತರ ನೇ ನಗು. ಹಳೆ ಕಾಲದ ಕಚ್ಛೆ ಪಂಚೆ ಶಾಲ್ ತರ ಮೇಲೆ ಕವರ್ ಮಾಡ್ಕೊಂಡ್ ಇದ್ದ. ನನ್ನ
ನೋಡಿದ ತಕ್ಷಣ ನಾನೇ ಮಾರ ಅಂದ
ಮಾರ ಮತ್ತೆ ನನ್ನ(ಎಷ್ವಾಂತ್)
ನಡುವಿನ conversation ...
ನಾನು( ಎಷ್ವಾಂತ್
) : ನಂಗೆ ಇದು ನಂಬಕ್ಕೆ ಆಗ್ತಿಲ್ಲ
ಮಾರ : ನಮಗೆ
ಸ್ವಂತವಾಗಿ ಅನುಭವ ಆಗೋ ತನಕ ಎಲ್ಲ ಹೀಗೆ .. ನಂಬಲ್ಲ,
ಸುಳ್ಳು ಅಂತಿರ್ತಿವಿ. ನೋಡಿ ಇದ್ರಲ್ಲಿ ಏನೋ ಮಾಯಾ ಇಲ್ಲ ನಾನು ಈ ಲೋಕದ ಒಬ್ಬ ವ್ಯಕ್ತಿ, ಹೌದು ಆ
ಮಂತ್ರ ಒಂದ್ ರೀತಿಯ ಮಾಯಾ ಅಷ್ಟೇ
ನಾನು : ಎಲ್ಲಿ
ಇಲ್ಯಾರೂ ಗಿಡದವ್ರು ಕಾಣ್ಸ್ತ ಇಲ್ಲ.
ಮಾರ : ಇಲ್ಲ
ನಾನು ನಿಮ್ಮನ್ನ ಕರಿಸಿದ್ದು. ಬೇರೆಯವರಿಗೆ ಇದರ ಬಗ್ಗೆ ಹೇಳಿಲ್ಲ, ನಮ್ ಜನ ಅವರ ಪಾಡಿಗೆ ಕೆಲಸ ಮಾಡ್ತಿರ್ತಾರೆ
ಬೇರೆಯವರ ವಿಷ್ಯಕ್ಕೆ ತಲೆ ಹಾಕಲ್ಲ ಗಿಡಗಳಿಗೆ ಏನು ತೊಂದ್ರೆ ಆಗ್ದಿದ್ರೆ ಸಾಕು ಅವರಿಗೆ ಅಷ್ಟೇ
ನಾನು : ನಿಮ್
ತಾಯಿ ತಂದೆ ಎಲ್ಲ
ಮಾರ : ತಂದೆ
ಗೊತ್ತಿಲ್ಲ, ತಾಯಿ ಇದ್ಲು ನಮ್ಗಳಿಗೆ ಕಣ್ಣು ತೆರೆಯೋದು ಬುದ್ದಿ ಬಂದ್ ಮೇಲೆ, ನಂಗೆ ನೆನಪಿದೆ ನನ್
ತಾಯಿ ನನ್ನನ್ನ ತುಂಬ ಚೆನ್ನಾಗಿ ನೋಡ್ಕೋತಾ ಇದ್ಲು, ಕಥೆ ಹೇಳ್ತಿದ್ಲು, ಗಿಡಗಳ್ನ ಚೆನ್ನಾಗಿ ನೋಡ್ಕೋ
ಬೇಕು ಅಂತಿದ್ಲು. ಒಂದ್ ದಿನ ನಂಗೆ ಕಣ್ ಕಣಕ್ಕೆ ಶುರು ಆಯಿತು. ನನ್ ತಾಯಿನ ಹುಡ್ಕದೆ ತುಂಬ, ಎಲ್ಲು
ಸಿಗ್ಲಿಲ್ಲ ಪಕ್ಕದ ಮರದವರ್ನ ಕೇಳ್ದೆ. ಅವರು ಏನು ಹೇಳಿಲ್ಲ. ಏನಕ್ಕೆ ಬಿಟ್ಟು ಹೋದ್ಲು ಅಂತ ಅವರು
ಹೇಳಿಲ್ಲ. ನಮ್ ಜನರದು ಅದೇ ತೊಂದ್ರೆ ತುಂಬ ರಹಸ್ಯ ಗಳನ್ನ ಇಟ್ಕೋತಾರೆ ಯಾಕೆ ಅಂತ ಗೊತ್ತಿಲ್ಲ.
ನಾನು : ವಿಚಿತ್ರ
ನಿಮ್ ಕಥೆ, ಈಗ ನನ್ನಿಂದ ಏನ್ ಸಹಾಯ ಬೇಕು ಹೇಳಿ.
ಮಾರ : ಸಹಾಯ
ತುಂಬ ಚಿಕ್ದು. ನಮ್ ತಾಯಿ ನಂಗೆ ಹೇಳ್ತಿದ್ಲು ಸಸ್ವುರ್ಕೋಟೆ ಅಂತ ಒಂದು ಊರ್ ಇದ್ಯಂತೆ ಅಲ್ಲಿ ಇರೋ
ಸುಂದರ ಮರ ಎಲ್ಲು ಇಲ್ವಂತೆ. ಆ ಊರು ನೋಡ್ಬೇಕು ಅಂತ ತುಂಬ ಆಸೆ ಇದೆ ನಂಗೆ. ನಮ್ ತಾಯಿ ಅಲ್ಲಿ ಇರಬಹುದು
ಅಂತ ಒಂದು ನಂಬಿಕೆ. ಅಲ್ಲಿಗೆ ನಾನು ಹೋಗಿ ಬರ್ತೀನಿ ಅಲ್ಲಿ ತನಕ ನೀವು ನಮ್ ಲೋಕಕ್ಕೆ ಬಂದು ಈ ಮರನಾ
ನೋಡ್ಕೊತಿರ್ತಿರಾ
ನಾನು : ನಿಮ್ಮವರಿಗೆ
ಹೇಳ್ಬಹುದಲ್ವಾ
ಮಾರ : ಕೇಳಿ
ನೋಡಿದೆ ಯಾರು ಒಪ್ಕೋತಾ ಇಲ್ಲ. ನಿಮ್ ಸಮಯ ಏನು ವ್ಯರ್ಥ ಆಗೋದೇ ಇಲ್ಲ ನೀವು ಈಗ ನಿಮ್ ಪ್ರಪಂಚಕ್ಕೆ
ಹೋಗತೀರ ಅಲ್ವಾ. ನೀವು ಬಂದಿರೋ ಟೈಮ್ ಮತ್ತೆ ನೀವು ಹೋಗೋ ಟೈಮ್ ಒಂದೇ ಇರತ್ತೆ
ನಾನು : ಹೌದ?
ಒಂದ್ಸಲ ನೋಡ್ಕೊಂಡ್ ಬರ್ತೀನಿ (ಅಂತ ಮಂತ್ರ ಹೇಳಿ ಹೋಗಿ ಬಂದೆ)
ಹೌದು ಮಾರ ಇದು
ವಿಚಿತ್ರ, ಹಾಗ್ ಇದ್ರೆ ಅಲ್ಲಿ ಯಾರಿಗೂ ಏನು ಗೊತ್ತಾಗೊಲ್ಲ. ನಾನು ನೋಡ್ಕೋತೀನಿ ಬಿಡು ನೀನೂ ಹೋಗಿ
ಬಾ ...
ಕೋನ್ಸೆಲ್ಲಿಂಗ್
ಸೆಂಟರ್ ನಲ್ಲಿ ಮತ್ತೆ ಮೌನ. ಈ ಬಾರಿ ನೀರು ಕುಡಿಯೋ ಸರದಿ ನನ್ನದಾಗಿತ್ತು, ಈ ಕಥೆ ಇವನ ಸೃಷ್ಟಿ ಮಾಡಿ
ನನ್ನ ಪರೀಕ್ಷೆ ಮಾಡ್ತಿದಾನ ಇಲ್ಲ hallucinate ಮಾಡ್ಕೋತಾ ಇದನ ಅನ್ನೋದು ನನ್ನ ಪ್ರಶ್ನೆ. ಈ ಕಥೇನ
ಸುಳ್ಳು ಅಂತ ಹೇಳಕ್ಕೆ ಕರಣ ಸಿಗ್ತಾ ಇರ್ಲಿಲ್ಲ. ಲಾಜಿಕಲ್ ಆಗಿ ರೀಜನ್ ಕೊಡದೆ ಅದನ್ನ ಸುಳ್ಳು ಅಂತ
ಹೇಳೋ ಹಾಗ್ ಇಲ್ಲ. ಥಟ್ ಟೂ ಏಜ್ ಆ ಕೌಂಸೆಲರ್
ನಾನು ಕೇಳ್ದೆ,
ಈಗ ಏನ್ ನಿಮ್ ಪ್ರಾಬ್ಲಮ್ ಅಂತ. ಮುಂದೆ ಏನ್ ಆಯಿತು?\
ಎಷ್ವಾಂತ್ :
ಈ ಘಟನೆ ನಡೆದು ಸುಮಾರ್ ನಾಲ್ಕು ವರ್ಷ ಆಯಿತು. ಮಾರ ಇನ್ನು ವಾಪಾಸ್ ಬಂದಿಲ್ಲ ನಾನು ನೀರ ಹಾಕ್ತ ನೇ
ಇದೀನಿ. ಇದು ಸುಳ್ಳೋ ನಿಜಾನೋ ಗೊತ್ತಾಗ್ತಾ ಇಲ್ಲ ಒಂದ್ ಸಲ ನೋಡೋಣ ಅಂತ ಮೂರು ನಾಲ್ಕು ವಾರ ನೀರ್
ಹಾಕೋದು ಬೇಡಾ ಅನ್ಕೊಂಡೆ. ಆ ಗಿಡ ಬಡವಾಗಿತ್ತು, ಮಂತ್ರ ಹೇಳ್ದೆ ಆ ಲೋಕಕ್ಕೆ ಹೋಗ್ದೆ ಇಲ್ಲಿಂದಾನೆ
ನೀರ್ ಹಾಕಿದ್ರೆ ಗಿಡ ಬಡವಾಗತ್ತೆ ...
ನಂಗಂತೂ ಈ ಕಥೆ
ಸುಳ್ಳು ಅಂತ ಹೇಳೋಕೆ ಯಾವ ಪ್ರೂಫ್ ಕೂಡ ಸಿಕ್ಕಿಲ್ಲ, ಆ ಮಂತ್ರ ಏನು ಅಂತ ಕೆಳಕ್ಕೆ ಆಗಲ್ಲ ? ಹೇಳದ್ರೆ
ನಾನು ಆ ಪ್ರಪಂಚಕ್ಕೆ ಹೋಗ್ಬಿಡ್ತಿನಿ ಅಂತ ನೇ, ನನ್ ಪ್ರೊಫೆಶನ್ ಪ್ರಕಾರ ಕ್ಲೈಂಟ್ ಹೇಳಿದ್ದು ಸುಳ್ಳು
ಅಂತ ವಿಥೌಟ್ ಪ್ರೂಫ್ ಹೇಳೋ ಹಾಗ್ ಇಲ್ಲ
ನೀವು ಏನ್ ಮಾಡತೀರಾ
ಈ ಪೊಸಿಷನ್ ಅಲ್ಲಿ? ಹೇಳಿ ನೋಡೋಣ ...
ಅದಕ್ಕೆ ಹೀಗ್
ಹೇಳ್ದೆ : ಇದು nimma brahme ನೋ ಇಲ್ವೋ ಅಂತ ಮೊದಲು
ಹೀಗೆ ಪರೀಕ್ಷೆ ಮಾಡೋಣ. brahme ಆಗಿದ್ರೆ ಬೇರೆ ತರ ಟ್ರೀಟ್ಮೆಂಟ್ ಮಾಡ್ಬೇಕಾಗತ್ತೆ ಇಲ್ದಿದ್ರೆ ಈದ್
ಒಂದು ಅಚ್ಚರಿ ನೇ.
ಒಂದು ಕೆಲಸ ಮಾಡಿ
ನೀವು ಇನ್ ಮೇಲಿಂದ ಆ ಗಿಡಕ್ಕೆ ನೀರು ಮಂತ್ರ ಹೇಳಿ ಹಾಕಕ್ಕೆ ಹೋಗ್ಬೇಡಿ. ಸರಿಯಾಗಿ ಎರಡು ಮೂರು ವಾರ
ನೋಡೋಣ ಆ ಮರ ಬಡವಾದ್ರೆ ಇದು ಒಂದು ಅದ್ಭುತ ಇಲ್ದಿದ್ರೆ ನಿಮ್ brahme ಅಂಕೋಳೋಣ
ಎಷ್ವಾಂತ್ :
ಒಹ್ ಥಟ್ ಈಸ್ ರೈಟ್, ಹಾಗೆ ಮಾಡಣ ಅಂತ ಹೊರ್ಟ
ಒಂದು ವರದ ನಂತರ
ಎಷ್ವಾಂತ್ ಮತ್ತೆ ನಮ್ ಸೆಂಟರ್ ಗೆ ಬಂದ
ಸರ್ ನಂಗೆ ಮತ್ತೆ
ಅವರಿಂದ ಲೆಟರ್ ಬಂದಿದೆ ನೋಡಿ. ಮಾರ ವಾಪಾಸ್ ಬಂದಿದಾನೆ ಮಾರಾ ನೇ ಮರ ನೋಡ್ಕೋತಾನ್ ಅಂತೆ. ನಮಗೆ ಟೆನ್ಶನ್ ಇಲ್ಲ ಬಿಟ್ ಬಿಡಿ.
ನಾನು ಇನ್ ಮೇಲಿಂದ ತಲೆ ಕೆಡ್ಸ್ಕೊಳೋಕ್ಕೆ ಹೋಗಲ್ಲ
ಮತ್ತೆ ಮೌನ,
ಎಂಥ ಬುದ್ಧಿವಂತ ಹುಚ್ಚರಿರ್ತರಪ್ಪಾ ಪ್ರಪಂಚದಲ್ಲಿ ಅನ್ಕೊಂಡೆ
ಈಗ ಇವ್ನು ಹೇಳಿದ್ದು
ಕಟ್ಟು ಕಥೇನ, ಇಲ್ಲ ಇವ್ನು hallucinate ಮಾಡ್ಕೋತಾ ಇದ್ನ, ಇಲ್ಲ ಎಲ್ಲ ನಿಜಾನಾ ಅಂತ ಹೇಗೆ ಪ್ರೂವ್
ಮಾಡ್ಲಿ ?
+ನಾಗಭೂಷಣ್