Wednesday, 19 February 2020

ಕಾವಲುಗನಸು

ಶೀರ್ಷಿಕೆ : ಹಳೆ ಪ್ರೀತಿ ಹೊಸ ರೋಗ
ಲೇಖಕರು : ನಾಗಭೂಷಣ್ ಆರ್ ಅನ್ವೇಕರ

ಪ್ರಣಯದ ದಣಿವಿಗೆ ಮಣಿದ ಸಂಗೀತ, ಮತ್ತೆ ಮಣಿದಿದ್ದಳು, ನಿದಿರೆಗೆ. ಅದು ಗುಡುಗು ಮಳೆಯ ರಾತ್ರಿ. ಅವರಿಬ್ಬರ ಸಾಂಗತ್ಯ ಹೊಸದೇನಲ್ಲ, ಆದರೂ ಮುಂಚಿನ ಅನುಭವದ ನೆನಪೇ ಇರದ ಹಾಗೆ ನಡಿಯುತ್ತಿತ್ತು ಪ್ರತಿ ಸಲ್ಲಾಪ. ಮದನ್ ಗೆ ಸಂಗೀತ ಆ ರಾತ್ರಿ ಇನ್ನು ಬೇಕಿತ್ತು, ಆ ರೂಮ್ ನ ಕಿಟಕಿಯ ಹೊರಗೆ ಸುರಿಯುವ ಮಳೆಯನ್ನೇ ನೋಡುತ್ತಾ ಎರಡು ಸಿಗರೇಟ್ ಆಗಲೇ ಮುಗಿಸಿ ಮೂರನೆಯದನ್ನು ಹಚ್ಚುವಷ್ಟರಲ್ಲಿ ಒಂದು ಗುಡುಗು. ಅವನ ಮನದಲ್ಲಿ, ಇನ್ನು ಜೋರಾಗಿ ಈ ಗುಡುಗು ಬರಬಾರದೇ, ಸಂಗೀತ ಏಳ ಬಾರದೆ ಎಂದು ಕೊಳ್ಳುತ್ತಿದ್ದ. ಅವನು ಮಾಡಿದ ಸಿಗರೇಟ್ ಹೋಮ ಯಾವ ದೇವರಿಗೆ ತಲುಪಿತೋ ಗೊತ್ತಿಲ್ಲ ಜೋರಾದ ಗುಡುಗಿಗೆ ಸಂಗೀತಾಳ ಕಣ್ಣು ತೆರೆಯಿತು.

ತೆರೆದ ಕಂಗಳಿಂದ ಒಮ್ಮೆ ಮದನ್ ನ ಕಡೆ ನೋಡಿದಳು. ಮದನ್ ಎಲ್ಲಿ ತಾನು ಮನದಲ್ಲಿ ಅಂದುಕೊಂಡಿದ್ದು ಕೇಳಿಸಿ ಕೊಂಡಳೋ ಎಂದು ಭಯದಲ್ಲಿ, ಗುಡುಗು ಎಂದು ಅವಳ ಬಳಿ ನಡೆದನು. ಅವಳ ಪಕ್ಕದಲ್ಲೇ ಕೂತು ಹೊದಿಕೆಯ ಹೊರಗೆ ಚಾಚಿದ ಅವಳ ಕೋಮಲ ಕೈಗಳನ್ನು  ಸ್ಪರ್ಶಿಸುತ್ತಾ. ನಿಂಗೊತ್ತಾ, ನಿನ್ ಕೈ ಮೇಲೆ ಇರೋ ಈ ಚುಕ್ಕೆ, ಕತ್ತಿನ ಆ ಕಲೆ, ಕೆನ್ನೆ ಮೇಲಿನ ಮೊಡವೆ ಯಾವ್ದು ನೀನು ಹುಟ್ಟದಾಗ ಇರ್ಲಿಲ್ಲ. ಹುಟ್ಟಿದಾಗ ಎಷ್ಟು ಕೋಮಲ, ನಿಷ್ಕಲ್ಮಶ ಒಳ್ಳೆ ಹತ್ತಿ ಉಂಡೆ ಈದ್ ಹಾಗೆ ಇದ್ದೆ ಅನ್ಸತ್ತೆ. ಎಲ್ಲ ಬೆಳಿತಾ ಆದ ನೋವು, ಜ್ವರ, ಗಾಯದಿಂದ ಬಂದಿರೋದು. ನೋಡು ನನ್ನ ಜೊತೆ ನೀನಿರುವಾಗ ಯಾವ ನೋವು, ಗಾಯದ ಸೋಂಕು ನಿನಗೆ ಬರ ಬರ್ದು. ನಿನ್ ಖುಷಿಗೆ ಈ ಜೀವಾ ಮಾಲೂಮ್" ಎಂದ ಸಂತೋಷ.

ಇಂತಾ ಪ್ರ್ರೇತಿಯ ಅತಿರೇಕದ ಮಾತುಗಳು ಇಬ್ಬರಿಗೂ ಹೊಸತೇನಲ್ಲ ಆದರೂ ಪ್ರತಿ ಬಾರಿ ಪ್ರಣಯದ ಆಮಂತ್ರಣ ಹೀಗೆ ಇರುತ್ತಿತ್ತು, ಕೇಳಿದ ಸಂಗೀತ ಕಣ್ಣುತೆರೆದು ಮದನ್ ನೇ ನೋಡುತ್ತಾ "ಯಾರೋ ನೀನು" ಎನ್ನುತ್ತಿದಂತೆ ಬೆಚ್ಚಿ ಬಿದ್ದ ಮದನ್ ತನ್ನ ಕನಸಿನಿಂದ ಎದ್ದನು. ಸಂಗೀತ ಅಂದಿನಂತೆ ಅವನ ಪಕ್ಕದಲ್ಲಿ ಮಲಗಿದ್ದಳು ಆದರೆ ಕೂದಲು ಬೆಳ್ಳಗಾಗಿತ್ತಷ್ಟೆ, ಕೆನ್ನೆಯ ಮೇಲಿನ ಮೊಡವೆ ಕಲೆಯ ಪಕ್ಕ ವಯಸ್ಸಿಗೆ ಸಾಮಾನ್ಯವದ ಸುಕ್ಕು ಗಳಿದ್ದವಷ್ಟೆ. ಮೂವತ್ತು ವರ್ಷದ ಹಿಂದಿನ ಯಾವುದೊ ಒಂದು ನೆನಪು ಕನಸಾಗಿ ಬಂದಿತ್ತು. ಮದನ್ ಗಡಿಯಾರದ ಕಡೆ ನೋಡಿದಾಗ ಗಂಟೆ ಮೂರಾಗಿತ್ತು. ತನ್ನ ಹಣೆಯ ಮೇಲಿನ ಬೆವರನ್ನು ಒರೆಸಿಕುಳ್ಳತ್ತ ಮಂಚದ ಪಕ್ಕದಲ್ಲಿನ ರೀಡಿಂಗ್ ಟೇಬಲ್ನತ್ತ ಹೋಗಿ ಕೂತ. ತನ್ನ ಮನದಲ್ಲೇ ಮಾತನಾಡಲಾರಂಭಿಸಿದ

ನನ್ನ ಕೈನಲ್ಲಿ ಇದು ಆಗಲ್ಲ ಸಂಗೀತ. ನಿನ್ನ ಸಾಂಗತ್ಯದ ಅಭ್ಯಾಸ ಆಗಿರೋ ಈ ಜೀವಕ್ಕೆ ನಿನ್ ಮರವು ಹುಚ್ತನಾನ ಸಹಿಸ್ಕೊಳಕ್ಕೆ ಆಗಲ್ವೆ. ಎಂದು ಟೇಬಲ್ ನ ಡ್ರಾವೆರ್ ಒಳಗೆ ಅಡಗಿಸಿಟ್ಟ ಸ್ಲೀಪಿಂಗ್ ಟ್ಯಾಬ್ಲೇಟ್ಸ್ ನ ಡಬ್ಬಿ ಹುಡುಕಿ ತೆಗೆದ. ತನಗರಿವಿರದ ಹಾಗೆಯೆ ತನ್ನ ಕಂಗಳಿಂದ ಹನಿಗಳು ಜಾರಿದವು. ಎಂದು ಆಳದ ಕಂಗಳಿಂದ ಇತ್ತೀಚಿಗೆ ಯೆಥೇಚ್ಛವಾಗಿ ಹರಿಯುತ್ತಿರುವ ಕಣ್ಣೀರನ್ನು ನೋಡಿ, ಇನ್ನು ಅಳು ಬಂತು. ಪಕ್ಕದಲ್ಲಿ ಮಲಗಿದ ಸಂಗೀತ ಳನ್ನು ನೋಡುತ್ತಾ, ಸ್ಲೀಪಿಂಗ್ ಪಿಲ್ಸ್ನ ಡಬ್ಬಿಯನ್ನು ಬಿಗಿದು ಹಾಗೆ ಮೇಜಿನ ಮೇಲಿ ತಲೆ ಊರಿದನು, ಮದನ್ ನ ಕನವರಿಕೆ ಕೇಳಿದ ಕಣ್ಣೀರು ಕೂಡ ಅತ್ತವೂ.

ಆರು ಗಂಟೆಯ ಅಲಾರ್ಮ್ ನ ಸದ್ದಿಗೆ ಎದ್ದ ಸಂಗೀತ. ಮೇಜಿನ ಮೇಲೆ ತಲೆ ಊರಿ ಮಲಗಿದ ಮಾದನ್ ನ ನೋಡಿ ಸ್ವಲ್ಪ ಶಾಕ್ ಆದಳು, ಅವನ ಬಳಿ ನಡೆಯುತ್ತಿದಂತೆ ಅಲ್ಲೇ ಬಿದ್ದಿದ್ದ ಮಾತ್ರೆಯ ಡಬ್ಬಿ ಕಂಡಳು. ಸ್ವಲ್ಪ ಗಾಬರಿ ಆಯಿತು, ಎತ್ತಿಕೊಂಡು ನೋಡುತ್ತಿದಂತೆ ಸಿಡಿಲೆ ಬಡಿದಂತಾಯಿತು. ಕೂಡಲೇ, ಮೊನ್ನೆ ಡಾಕ್ಟರ್ ಹೇಳಿದ್ದು ನೆನಪಾಯಿತು, "ಮೇಡಂ ಇದು ಕಾಂಪ್ಲಿಕೇಟೆಡ್ ಕೇಸ್ ಇವರನ್ನು ಮನೆಯಲ್ಲಿ ಇರಿಸಿಕೊಳ್ಳೋದು ನಾವು ಅದ್ವಿಸ್ ಮಾಡಲ್ಲ" . ಕೈಯಲ್ಲಿ ಹಿಡಿದ ಡಬ್ಬಿಯಿಂದ ಮಾತ್ರೆಯ ಸದ್ದು ಕೇಳುತ್ತಿದಂತೆ ಸ್ವಲ್ಪ ಧೈರ್ಯ ಬಂತು. ಮದನ್ ನ ಭುಜ ತಟ್ಟಿದಳು. ಗಾಢ ನಿದಿರೆಯಲ್ಲಿ ಇರಲಿಲ್ಲವೇನೋ ಭುಜ ತಟ್ಟಿದ ಕೂಡಲೇ ಮದನ್ ಗೆ ಎಚ್ಚರವಾಯಿತು, ಸಂಗೀತಾಳಿಗೆ ಜೀವ ಬಂದಂತಾಯಿತು. ಕೂಡಲೇ ಆ ಡಬ್ಬಿಯನ್ನು ತನ್ನ ಹಿಂದೆ ಹಿಡಿದು, "ಮದನ್ ಇವತ್ತು ಶಂಕರ್ ಬರಕ್ಕೆ ಹೇಳಿದ್ದರಲ್ಲ ರೆಡಿ ಆಗಿ ಹೋಗೊಣ ಎಂದಳು", ಏನು ತಿಳಿಯದ ಹಾಗೆ ಮದನ್ ಸರಿ ಎಂದನು, ತನ್ನ ಕಂಗಳನ್ನು ಉಜ್ಜಿಕೊಳ್ಳುತ್ತಾ.

ಬೆಳಗ್ಗೆ ೧೦:೩೦ ಸಮಯವಾಗಿತ್ತು, ಸ್ಲೀಪಿಂಗ್ ಪಿಲ್ಸ್ ನ ಬಗ್ಗೆ ತಿಳಿಸಿ, ಮದನ್ ನನ್ನ ಎಕ್ಸಾಮಿನ್  ಮಾಡಲು Dr ಶಂಕರ್ ಒಡನೆ ಬಿಟ್ಟು ಸಂಗೀತ ಹೊರಗೆ ಕಾಯುತ್ತಿದ್ದಳು. ವಿದೇಶದಲ್ಲಿರುವ ತನ್ನ ಮಗ ಸಾತ್ವಿಕ್ ಗೆ ಈ ವಿಷಯ ತಿಳಿಸಿರಲಿಲ್ಲ, ಈಗ ಸುಮಾರು ದೂರದ ಅಮೇರಿಕಾದಲ್ಲಿ ಸಮಯ ರಾತ್ರಿ ೧೦:೩೦ ಆಗಿರ ಬಹುದು ಇದನ್ನು ತಿಳಿಸಿ ಅವನ ನಿದ್ದೆ ಕೆಡಿಸ ಬಹುದೇ ಎಂಬುದು ಅವಳ ಯೋಚನೆ ಆಗಿತ್ತು. ವಾಟ್ಸಾಪ್ ನಲ್ಲಿ ಒಂದು ಮೆಸೇಜ್ ಮಾಡಿ ನೋಡೋಣ ಎನ್ನುವಷ್ಟರಲ್ಲಿ ಮದನ್ ಹೊರ ಬರುತ್ತಿದಂತೆ, ಶಂಕರ್ ನ ಮಾತಾಡ್ಸದೇ ನಿನ್ನ ಕರೀತಾ ಇದಾರೆ ಹೋಗು ಎಂದನು. "ನೀವ್ ಇಲ್ಲೇ ಕೂತಿರಿ ಬಂದೆ" ಎಂದು ಒಳ ನಡೆದಳು ಸಂಗೀತ.

ಸರಿ ಸುಮಾರು ನಲವತ್ತು ವಯಸ್ಸಿನ, Dr ಶಂಕರ್ ಕೊಂಚ ಕಿಡಿ ಕಿಡಿ ಯಾದ ಹಾಗೆ ಕಂಡಿತ್ತು ಸಂಗೀತ ಯಾವತ್ತೂ ಅವರನ್ನು ಈ ರೀತಿ ನೋಡಿರಲಿಲ್ಲ. ಸಂಗೀತ ತಂದ ಸ್ಲೀಪಿಂಗ್ ಪಿಲ್ಸ್ ನ ಡಬ್ಬಿ ಅವರ ಮೇಜಿನ ಮೇಲೆ ಇತ್ತು. ಸಂಗೀತ ಕೂರುವ ಮೊದಲೇ "ಅಮ್ಮ ನಿಮಗೆ ಈ ಕೇಸ್ ಕಾಂಪ್ಲಿಕೇಟೆಡ್, ಮನೇಲಿ ಇರ್ಸ್ಕೊಳದು ಅದ್ವೈಸಬಲ್  ಅಲ್ಲ ಅಂತ ಹೇಳಿದ್ದೆ ತಾನೇ ಈಗ ನೋಡಿ" ಎಂದನು. "ಏನೋ ಮನೆಲ್ ಇದ್ರೆ ಹಳೇದನ್ನ ನೆನಪು ಮಾಡಿ ಮತ್ತೆ ನಾರ್ಮಲ್ ಆಗ್ತಾರೆ ಅನ್ನೋ ಆಸೆ, ಈ ಅತಿರೇಕಕ್ಕೆ ಹೋಗತ್ತೆ ಅನ್ಕೊಂಡಿರ್ಲಿಲ್ಲ ಸರ್ " ಎಂದಳು. "ಅಮ್ಮ ನಿಮಗೆ ಒಂದು ಇಂಪಾರ್ಟೆಂಟ್ ವಿಷಯ ಹೇಳ್ತೀನಿ ನೋಡಿ, ನಾವು ಚೆಕ್ ಮಾಡಿರೋ ಪ್ರಕಾರ ಅವರು ಟ್ಯಾಬ್ಲೇಟ್ಸ್ ನ ಅವರು ತೊಗೊಳೋಕ್ಕೆ ಇಟ್ಕೊಂಡಿದ್ದಲ್ಲ ನಿಮಗೆ ಕೊಡ್ಬೇಕು ಅನ್ಕೊಂಡಿರೋದು, ಅವರ ಪ್ರಕಾರ ನಿಮಗೆ ಮರೆವಿನ ಕೈಲೇ ಇದೆ" ಇದನ್ನು ಕೇಳುತ್ತಿದ್ದ ಹಾಗೆ ಸಂಗೀತ ಕುಸಿದಳು.

Dr ಶಂಕರ್ ಎದ್ದು ಬಂದು ನೀರಿನ ಗ್ಲಾಸ್ ಕೊಟ್ಟು, "ನೋಡಿ ಮಾ ಇದು ರೇವೆರ್ಸಿಬಲ್ ಅಲ್ಲ ಇಲ್ಲೇ ಅವರನ್ನ ಬಿಡಿ, ನಿಮಗೂ ಅನುಕೂಲ ಅವರಿಗೂ ಅನುಕೂಲ ನಮ್ಮಲ್ಲಿ ಒಳ್ಳೆ ಕೋನ್ಸಿಲರ್ಸ್, ಡಾಕ್ಟರ್ಸ್ ಇರ್ತರೆ", "ಸರಿ ಡಾಕ್ಟರ್ ನನ್ನ ಮಗನ್ ಜೊತೆ ಮಾತಾಡಿ ಹೇಳ್ತೀನಿ" ಎಂದಳು ಸಂಗೀತ, "ಬೇಗ ಡಿಸೈಡ್ ಮಾಡಿ ಮಾ, ದಯವಿಟ್ಟು" ಅಂದರು ಶಂಕರ್. ಅಲ್ಲಿಂದ ಹೊರಟ ಸಂಗೀತ ಮತ್ತು ಮದನ್ ಆಟೋ ಒಂದನ್ನು ಹಿಡಿದರು. ಆಟೋದಲ್ಲಿ ಆಗಾಗ ಮಿರರ್ ಇಂದ ಮದನ್ ನನ್ನು ನೋಡಿತ್ತಿದ್ದ ಸಂಗೀತಾ ಗೆ ಕೊಂಚ ಆಶ್ಚರ್ಯ ವಾಗುತ್ತಿತ್ತು, ಏನೊ ಆಗದ ಹಾಗೆ ಟ್ರಾಫಿಕ್ ಗಮನಿಸುತ್ತಿದ್ದ ಮದನ್ ನ ನೋಡಿ. ಬದುಕು ಹಾಗು ಹುಚ್ಚುತನದ ನಡುವಿನ ಆಯ್ಕೆ ಅವಳಿಗೆ ಆ ಸಮಯ ಕಷ್ಟುವಾಗುತ್ತಿತ್ತು.

ಮನೆ ತಲುಪಿದ ಹಾಗೆ ಮದನ್ ಸಂಗೀತ ಗೆ "ಸುಸ್ತಾಯಿತು ಮಲ್ಕೊತೀನಿ" ಎಂದ ಹೇಳಿ ತಮ್ಮ ರೂಮ್ ಕಡೆಗೆ ಹೊರಟ. ಡಾಕ್ಟಾರ್ ಶಂಕರ್ ಅವರಿಂದ ಡೈಯಾಗ್ನೋಜ್ ಆದ ಬಳಿಕ ಬಹುಷಃ ಮೂರು ತಿಗಳ್ ಆಗಿರಬಹುದು ಈಗ ಮದನ್ ನ ಇಂತ ಬಿಹೇವಿಯಾರ್ ಹೊಸತೇನಲ್ಲ ಈ ಅತಿರೇಕಕ್ಕೆ ಹೋಗಿರಲಿಲ್ಲವಷ್ಟೆ, ಒಂದು ಮುಂಜಾನೆ ೫:೩೦ಕ್ಕೆ ನಾದಿನಿಗೆ ಕರೆ ಮಾಡಿ ಬೈದದ್ದು  ಉಂಟು, ಮಗನಿಗೆ ಅವನು ಹತ್ತನೇ ತರಗತಿಯ ಪರೀಕ್ಷಿಯಲ್ಲಿ ಕಡಿಮೆ ಅಂಕಗಳನ್ನು ಪಡೆದ್ದದ್ದೆ ಅವನ ಪ್ರೊಫೆಷನಲ್ ಲೈಫ್ ನಲ್ಲಿ ಆದ ಕೆಲವು ಕಹಿ ಘಟನೆಗಳಿಗೆ ಕಾರಣ ಎಂದು ಅಸಂಬದ್ಧ ವಾದವನ್ನು ಪೇಜ್ ಗಟ್ಟಲೆ ಬರೆದು ರಾತ್ರಿ ಕಳಿಸಿದ್ದು ವಾಟ್ಸಾಪ್ ನಲ್ಲಿ ಕಳುಹಿಸಿದ್ದು ಉಂಟು. ಎಲ್ಲ ಬಾರಿಯೂ ಮನೆಗೆ ಬಂದಾಗ ಇದೆ ಬಗೆಯ ಇನ್ನೋಸೆನ್ಸ್ ನಿಂದಲೇ ಏನು ಆಗದವರೇ ಹಾಗೆ ಹೋಗಿ ಮಲಗುತ್ತಿದ್ದನು. ಎಂದಿನಂತೆ ಏನು ಕಳೆದ ರಾತ್ರಿಯ ವರ್ತನೆಗೆ ಕಾರಣ, ಕೆಲವು ಹಳೆ ನೆನಪನ್ನು ನೆನಪಿಸುವ ಪ್ರಯತ್ನದಲ್ಲಿ ಅವಳು ಅವನು ಜೊತೆ ರೂಮಿಗೆ ಹೋದಳು, ಅವನ ಪಕ್ಕದಲ್ಲೇ ಕೂತಳು. ಮದನ್ ಒಂದ್ ಸ್ಮೈಲ್ ಕೊಟ್ಟು ಕಣ್ಣು ಮುಚ್ಚಿದನು, ನಿದಿರೆಯನ್ನು ಆಮಿನ್ತ್ರಿಸುತ್ತ. ಸಂಗೀತ ಮದನ್ ಕೂದಲನ್ನು ಸವರಿದಾಳು, ಕಣ್ಣು ತೆರೆದ ಮದನ್ ಮತ್ತೆ ಅವಳನ್ನು ನೋಡಿ ನಕ್ಕ ಆಗ ಸಂಗೀತ,

"ನಿಂಗೊತ್ತಾ, ನಿನ್ ಕೈ ಮೇಲೆ ಇರೋ ಈ ಚುಕ್ಕೆ, ಕತ್ತಿನ ಆ ಕಲೆ, ಕೆನ್ನೆ ಮೇಲಿನ ಮೊಡವೆ ಯಾವ್ದು ನೀನು ಹುಟ್ದಾಗ ಇರ್ಲಿಲ್ಲ. ಹುಟ್ಟಿದಾಗ ಎಷ್ಟು ಕೋಮಲ, ನಿಷ್ಕಲ್ಮಶ ಒಳ್ಳೆ ಹತ್ತಿ ಉಂಡೆ ಈದ್ ಹಂಗೆ ಇದ್ದೆ ಅನ್ಸತ್ತೆ. ಎಲ್ಲ ಬೆಳಿತಾ, ಆದ ನೋವು, ಜ್ವರ, ಗಾಯದಿಂದ ಬಂದಿರೋದು. ನನ್ನ ಜೊತೆ ನೀನಿರುವಾಗ ಯಾವ ನೋವು, ಗಾಯದ ಸೋಂಕು ನಿನಗೆ ಬರ ಬರ್ದು. ಹಾಗ್ ನೋಡ್ಕೋತೀನಿ ಸಂತೋಷ್"

ಇದನ್ನು ಕೇಳಿ ಗೊಳೋ ಎಂದು ಅತ್ತು ಸಂಗೀತಾಳನ್ನು ಬಿಗಿದಪ್ಪಿದ ಮದನ್ ಸಂಗೀತಾಳಿಗೆ  "ನನ್ನ ಕೈನಲ್ಲಿ ಆಗಲ್ಲ ಕಣೆ ಇದು, ಬಾ ಇಬ್ರು ಸಾಯಣ" ಎಂದನು.

ಹಿಂದೆ ಎಂದೋ ಒಂದು ದಿನ ಬಸ್ ನಲ್ಲಿ ಒಬ್ಬ ಹುಚ್ಚನನ್ನು ಕಂಡು ಮದನ್ ಸಂಗೀತಾಳಿಗೆ ಹೇಳಿದ್ದು ನೆನಪಾಯಿತು "ನಂಗೆ ಗೊತ್ತಿಲ್ಲ ಸಂಗೀತ, ನೀನು ಯಾರು ಅನ್ನೋದರ ಅರಿವಿಲ್ದೆ ಇರುವಾಗ ಬದುಕಿ ಏನ್ ಪ್ರಯೋಜನ ಅಂತ, ಒಂದ್ ವಿಷಯ ಹೇಳ್ತಿನಿ ನನಗೇನಾದರೂ ಹುಚ್ಚು ಹಿಡಿದಿದೆ ಅಂತ ಆದ್ರೆ ನನ್ನ ಬಿಟ್ಟು ಬಿಡು ಓರ್ ನಾನೇ ಜೀವ ಬಿಟ್ ಬಿಡ್ತೀನಿ ಅನ್ಸತ್ತೆ". ಅಂದದ್ದು.