You can read few more of my stories here
http://takeacoffeebrk.blogspot.com/
ಪ್ರೇಯಸಿ ಕೇಳಿದ ಚಂದಿರನಿಗೆ
ಆಗಸವೆಲ್ಲ ಹುಡುಕಿದ
ಆಗಾಗ ಕಂಡು ಬರುವವನು
ಅಂದು ಅವನಿಗೆ ಕಾಣದಾದ
ಮೋಡದ ಮರೆಯಲ್ಲೋ ಇನ್ನೆಲ್ಲೋ
ತಿಳಿಯದೆ ಬೇಸರದಲ್ಲೇ ತೆರಳಿದ
ಮನೆಯಲ್ಲಿ ಕೂತು ಯೋಚಿಸಿದ ಅವನಿಗೆ
ತಿಳಿಯದಾಯಿತು ಅವಳಿಗೆ ಹೇಳಬೇಕಿದ್ದ ಉತ್ತರ
ಮಗ್ಗುಲನ್ನು ಬದಲಿಸುವಾಗ ಒಂದೇ ಯೋಚನೆ
ನಾಳೆ ಅವಳು ಸೇರಿಸುವಳೇ ಅವನನ್ನು ಹತ್ತಿರ
ಮುಂದೇನು ತಿಳಿಯದೆ ಎಂದಿನಂತೆ ಆಡಿಸಿದ
ಅವನ ಕೈಗಳಿಗೆ ತಿಳಿಯಿತು, ಚಡ್ಡಿಯಲ್ಲೇ ಇರುವನು ಚಂದಿರ
ನಾಗಭೂಷಣ್
'most of our problems are not problems at all', ಅಂತ ಯಾರೋ ಹೇಳಿದ್ದು ಈಗ ನಂಗೆ ಸರಿಯಾಗಿ ಅರ್ಥ ಆಯಿತು ಅನ್ಸತ್ತೆ, ಕೋವಿಡ್ ಬಂದ್ ಮೇಲೆ. ಅಷ್ಟು ಸಿಂಪಲ್ ಕಥೆ ಏನ್ ಅಲ್ಲ, ಹೇಳ್ತಿನಿ ಕೇಳಿ.
ಸಂಜೆ
ಆರ್ ಗಂಟೆ ಅನ್ಸತ್ತೆ ನಾನು
ಡಿಸ್ಚಾರ್ಜ್ ಆದಾಗ. ಅಲ್ಲೆ ಇದ್ದ ಬ್ರದರ್ ನ
ಕೇಳ್ದೆ, ೬:೧೦ ಅಂದ
. ನೀವೆಲ್ಲ ಮೊಬೈಲ್ ಅಡ್ಡಿಕ್ಷನ್ ಅಂತ ಇರ್ತೀರಲ್ಲ, ಕೈಗೆ
ಒಳ್ಳೆ ವಾಚ್ ಹಾಕೊಳಿ, ಮೊಬೈಲ್
ಅಡ್ಡಿಕ್ಷನ್ ಕಡಿಮೆ ಆಗತ್ತೆ ಅನ್ಸತ್ತೆ. ನಂಗೆ ಅದು ವರ್ಕ್
ಆಯಿತು.
ಕೋವಿಡ್
ಸೆಂಟರ್ ಬಗ್ಗೆ ನ್ಯೂಸ್ ಅಲ್ಲಿ ತೋರ್ಸಿದ್ ಅಷ್ಟು ಕ್ರೌಡ್ ಇರ್ಲಿಲ್ಲ. ಆದರು ನಾನು ಅಡ್ಮಿಟ್
ಆಗುವಾಗ ಸ್ವಲ್ಪ ಕ್ರೌಡ್ ಇತ್ತು ಅನ್ಸತ್ತೆ, ಆಕ್ಸಿಜನ್ ಲೆವೆಲ್ ಕಡಿಮೆ ಆದಾಗ ಆದ ಆಯಾಸ
ನಾನು ಲೈಫ್ ಅಲ್ಲಿ ನೋಡಿರ್ಲಿಲ್ಲ,
ಆ ಮಂಪರಲ್ಲಿ ಜಾಸ್ತಿ ಅನ್ಸ್ಥಿತೋ ಏನೋ ಗೊತ್ತಿಲ್ಲ ಬಟ್
ಆಗ ಮಾತೆ ಬೇರೆ, ಬದುಕಲ್ಲ
ಅನ್ನಿಸಿತ್ತು ಈಗ ಇಷ್ಟು ಆರಾಮಾಗಿ
ಉಸಿರಾಡ್ತಿದ್ರೆ, ‘ಜೀವ ಬಂದ್ ಹಂಗೆ
ಆಯಿತು’ ಅಂದ್ರೆ ಏನು ಅಂತ ಈಗ
ಅರ್ಥ ಆಯಿತು.
ಬ್ರದರ್
ಡಿಸ್ಚಾರ್ಜ್ ಆಗುವಾಗ ಹೇಳ್ತಿದ್ದ 'ಏನ್ ನಿದ್ದೆ ಸರ್
ನಿಮ್ಮದು, ಒಂದ್ ಲೆಕ್ಕದಲ್ಲಿ ಒಳ್ಳೇದ್
ಆಯಿತು ಬಿಡಿ ೪ ದಿನ
ಇವರು ಮಾಡಿದ್ ಅವ್ಯವಹಾರ ನೋಡೋದ್ ತಪ್ತಲ್ಲ' ಅಂತ. ನಿಜ ಹೇಳ್ಬೇಕು
ಅಂದ್ರೆ ನಾನ್ ಆ ನಿದ್ದೆ
ನ ಎಂಜಾಯ್ ಮಾಡಿದ್ದೆ, ನನ್ನ ಪ್ರಕಾರ ಕೋವಿಡ್
೨ ದಿನ ಮುಂಚೆ ನೇ
ಸರಿ ಹೋಗಿತ್ತು. ಸುಮ್ನೆ ಕೊಡ್ತಿದ್ದ ಸೆಡಟಿವ್ಸ್ ತೊಗೊಂಡ್ ಮಲ್ಕೊಂಡೆ. ಮತ್ತೆ ಸರಿ ಹೋದ್ ಮೇಲೆ
ಅದೇ ಪ್ರಪಂಚ ಅಲ್ವಾ ೨ ದಿನ ಮಲ್ಕೊಳನ
ಅನ್ಸ್ತು. ಆಮೇಲೆ ಜಾಸ್ತಿ ದಿನ ಇದ್ರೆ ಡೌಟ್
ಬರತ್ತೆ ಅಂತ ಡಿಸ್ಚಾರ್ಜ್ ಮಾಡ್ಸ್ಕೊಳೋಕೆ
ಶುರು ಮಾಡ್ದೆ. ಕೈ ಅಲ್ಲಿ ಮೊಬೈಲ್
ಇಲ್ದಿದ್ದಕ್ಕೂ ಎರಡ್ ದಿನ ಎಕ್ಸ್ಟ್ರಾ
ರೆಸ್ಟ್ ಸಿಕ್ಕಿದ್ದಕ್ಕೂ ಸಮಾಧಾನ ಆಯಿತು, ಜೀವನದಲ್ಲಿ ಏನ್ ಬೇಕ್ ಆದರು
ಫೇಸ್ ಮಾಡ ಬಹುದು ಅನ್ನಿಸ್ತಾ
ಇದೆ.
_*_
ಮೊಬೈಲ್
ಕೈ ಅಲ್ಲಿ ಇದ್ದಿದ್ರೆ ಫಸ್ಟ್ ಓಲಾ ಆಪ್ ಕಡೆ
ಕೈ ಆಟೋಮ್ಯಾಟಿಕ್ ಆಗಿ ಹೋಗ್ತಾ ಇತ್ತು
ಅನ್ಸತ್ತೆ. ಆಟೋ ಹಿಡಿಯಣ ಅಂತ
ಹೊರಗ್ ಬಂದೆ. ಲೊಕ್ಡೌನ್ ದು ಅದರದೇ ಆದ
ಅಡ್ವಾಂಟೇಜ್ ಮತ್ತು disadvantage ಇರತ್ತೆ, ಈ ಟೈಮ್ ಅಲ್ಲಿ
ಒಂದ್ ಕಾಫಿ ಸಿಕ್ಕಿದ್ರೆ ಚೆನ್ನಾಗಿತ್ತು
ಅನ್ಸತ್ತೆ ಬಟ್ ಈ ರೋಡ್
ಇಷ್ಟು ಖಾಲಿ ಆಗ್ ಇರೋದ್
ನೋಡಿದ್ದು ಫಸ್ಟ್ ಟೈಮ್. ರೋಡ್ ಕೊನೇಲಿ ೨
ಆಟೋ ನಿಂತಿತ್ತು ಆದರೆ ಹಾಸ್ಪಿಟಲ್ ಇಂದ
ಹೊರಗ್ ಬಂದು ಆಟೋ ಹಿಡದ್ರೆ
ಡ್ರೈವರ್ ಗಳು ಏನಾಗಿತ್ತು ಸರ್
ಅಂತ ಕೇಳ್ತಾರೆ, ಯಾಕ್ ಬೇಕು ರೋಡ್
ಖಾಲಿ ಇದೆ ಸ್ವಲ್ಪ ವಾಕ್
ಮಾಡಿ ನೆಕ್ಸ್ಟ್ ರೋಡ್ ಅಲ್ಲಿ ಆಟೋ
ಹಿಡಿತೀನಿ ಅನ್ಕೊಂಡ್ ಹೊರಟೇ. ಮೊಬೈಲ್, ಓಲಾ ಇದ್ದಿದ್ರೆ ಇಷ್ಟು
ಯೋಚನೆ ನೇ ನಡೀತಾ ಇರ್ಲಿಲ್ವೇನೋ
ಅನ್ನಿಸ್ತು, ಎನಿವೇ ಏನಕ್ಕೆ ಅಷ್ಟು ಬೈ ಬೇಕು ಮೊಬೈಲ್
ನ ಈಗ ಮನೆಗ್ ಹೋಗಿ
ಪದ್ಮ ಕೈ ಅಲ್ಲಿ ಮೊಬೈಲ್
ತೊಗೊಂಡ್ರೆ ಸಾಕ್ ಯಷ್ಟೋ ಗುಡ್
ವಿಶೇಸ್ ಮೆಸೇಜ್ ಬಂದಿರತ್ತೆ ಅನ್ನಿಸ್ತು. ಎನಿವೇ ಪದ್ಮ ನನ್ನ ಹೆಂಡ್ತಿ
ಅವಳ ಪರಿಚಯ
ಮೊದಲು ಆಗಿದ್ದು ಇನ್ಸ್ಟಾಗ್ರಾಂ ಅಲ್ಲೇ actually.
_*_
ಹಿಂಗೇ ಯೋಚನೆ
ಮಾಡ್ತಾ ರೋಡ್ ದಾಟಿ ಆಟೋ ಹಿಡಿದು ಕೂತಾಗ ಹಳೇದೆಲ್ಲಾ ಯೋಚನೆ ಬರ್ತಾ ಇತ್ತು, ಬೇಜಾರು ಇಲ್ಲ ಖುಷಿ
ನು ಇಲ್ಲ ಒಂಥರಾ ಪುನರ್ಜನ್ಮ ಸಿಕ್ಕ ಫೀಲಿಂಗ್ ಏನ್ ಬಂದ್ರು ಸರೀನೇ ಆಗಿರೋದೆಲ್ಲ ಸರೀನೇ ಅನ್ನಿಸ್ತಾ
ಇತ್ತು. ಹಿಂಗೇ ಕಂಟಿನ್ಯೂ ಆಗಲ್ಲ ಅನ್ಸತ್ತೆ, ಪ್ರಪಂಚ ತಲೆಗೆ ಒಂದ್ ಅಲ್ಲ ಒಂದ್ ಹುಳಾ ಬಿಡ್ತಾ ಇರತ್ತೆ
ಅನ್ಸತ್ತೆ. ಎನಿವೇ ಈಗ ಚೆನ್ನಾಗಿದೆ ಎಂಜಾಯ್ ಮಾಡಣ ಅನ್ಕೊಂಡೆ ಈ ಮಾತು ಪದ್ಮ ಗೆ ಹೇಳ್ಬೇಕು ಅಂತ ತಲೆ
ನಲ್ಲೆ ಇಂಗ್ಲಿಷ್ ಗೆ ಟ್ರಾನ್ಸ್ಲೇಟ್ ಮಾಡ್ಕೊಂಡೇ ನಗು ಬಂತು.
ಅಂದ್ ಹಾಗೆ ನಂದು
ಪದ್ಮ ದು ಲವ್ ಮ್ಯಾರೇಜ್, ಮದ್ವೆ ಆಗಿ ಒಂದ್ ವರ್ಷ ಆಗಿತ್ತು. ಪದ್ಮ ಹೆಂಗ್ ರಿಯಾಕ್ಟ್ ಮಾಡ್ತಾಳೆ
ಅನ್ನೋದೇ ನಂಗೆ ಕ್ಯೂರಿಯೋಸಿಟಿ, ಇಂಟೆರ್ ಕಾಸ್ಟ ಮ್ಯಾರೇಜ್ ಕೆಲವರು ಒಳ್ಳೇದು ಅಂತಾರೆ ಕೆಲವರು ಕಷ್ಟ
ಅಂತಾರೆ ಎರಡು ಏನಕ್ಕೆ ಅಂತ ನಂಗೆ ಅರ್ಥ ಆಯಿತು ಅನ್ಸತ್ತೆ ನಮ್ಮ ಒಂದ್ ವರ್ಶದ ಮದ್ವೇಲಿ ಸ್ಟಾರ್ಟಿಂಗ್
ಎಲ್ಲ ಚೆನ್ನಾಗಿತ್ತು ಸ್ಟಾರ್ಟಿಂಗ್ ಏನು ಇತ್ತೀಚಿಗೆ ಎರಡ್ ತಿಂಗಳಿಂದ ಸ್ವಲ್ಪ ಸತ್ಯ ಬೇರೆ ನೇ ಇರ
ಬಹುದು ಅನ್ನಿಸ್ತಾ ಇದೆ. ಫಾರ್ ಎಕ್ಸಾಮ್ಪ್ಲ್ ಅವಳು, ನಾನು ಮನೆಗ್ ಹೋದ್ರೆ ಹೇಗ್ ರಿಯಾಕ್ಟ್ ಮಾಡ್ತಾಳೋ
ಗೊತ್ತಿಲ್ಲ ನಂಗೆ ನಾನು ಹೇಗ್ ರಿಯಾಕ್ಟ್ ಮಾಡ್ ಬೇಕೋ ನಂಗ್ ಗೊತ್ತಿಲ್ಲ, ಈ ಥರ ಮುಂಚೆ ಎರ್ಡ್ ಮೂರ್
ಸಲ ಆಗಿದೆ ಆಗ್ ಚೆನ್ನಾಗಿತ್ತು ಈಗ್ಲೂ ಚೆನ್ನಾಗಿರತ್ತೆ ಅನ್ಸತ್ತೆ. ಬಟ್ ಅದು ಸ್ಟಾರ್ಟಿಂಗ್ ಅಲ್ಲಿ
ಈಗ ಹೆಂಗೋ ಅನ್ನೋ ಫೀಲಿಂಗ್, ಒಂದ್ ಕಡೆ ಮನಸಿಗೆ ಹತ್ರ ಇರೋ ಭಾಷೆ ನಲ್ಲಿ ಮಾತಾಡಿದ್ರೆನೇ ಸರಿ ಅನ್ನಿಸ್ತಿತ್ತು
ಇನ್ನೊಂದ್ ಕಡೆ ಹೊಸತನ ನೇ ಜೀವನ ಅಲ್ವಾ ಮುಂಚೆ ಇಷ್ಟ್ ಆಕ್ವಾರ್ಡ್ ಅನ್ಸಿಲ್ಲ ಅನ್ನಿಸ್ತಾ ಇತ್ತು.
_*_
ನಮ್ಮಮ್ಮನ ಬಗ್ಗೆ
ಸ್ವಲ್ಪ ಹೇಳ್ತಿನಿ, ಗವರ್ನಮೆಂಟ್ ಕೆಲಸದಲ್ಲಿ ಮುಂಚೆ ಇದ್ದಿದ್ರು ನಮ್ಮ ಅಮ್ಮ ಅವಳ ಸೊಸೆಯಂದಿರ ವಿಷಯಕ್ಕೆ
ಸ್ವಲ್ಪ ನರೋ ಮೈಂಡೆಡ್ ಅನ್ಸತ್ತೆ, ಅವಳ ರಿಯಾಕ್ಷನ್ ಕ್ಲಿಯರ್ ಆಗಿತ್ತು ನಂಗೆ, 'ಅವಳು ಸ್ವಲ್ಪ ಹುಷಾರ್
ಆಗಿ ಇರ್ಬೇಕಿತ್ತೋ ಕಣೋ, ಕೆಲಸದವರು ಈ ಟೈಮ್ ಅಲ್ಲಿ ಯಾಕ್ ಬೇಕಿತ್ತು' ಅಂತ.
ಪದ್ಮ ನೋಡಕ್ಕೆ
ಚೆನ್ನಾಗಿದ್ದಾಳೆ, ನಂಗೆ ಅನ್ಸೋದು ಅವಳ ಇನ್ಸ್ಟಾಗ್ರಾಮ್ ಪ್ರೊಫೈಲ್ ನೋಡ್ಡ್ರೆ ಅವಳನ್ನ ಯಾರ್ ಬೇಕ್
ಆದರು ಇಷ್ಟ ಪಡೋದು gaurantee , ಸುಮ್ನೆ ಮೇಕ್ ಅಪ್ ಮಾಡ್ಕೊಂಡ್ ಫೋಟೋ ಅಪ್ಲೋಡ್ ಮಾಡೋ ಸುಂದರಿಯರ
ಥರ ಅಲ್ಲ, she was beauty with brains . ತುಂಬ ಒಳ್ಳೆ ಆರ್ಟಿಸ್ಟ್ ಕೂಡ. ಚೆನ್ನೈ ಅವಳು ಕನ್ನಡ
ಬರಲ್ಲ, ತುಂಬ ಒಳ್ಳೆ ಫ್ಯಾಮಿಲಿ ಇಂದ ಬಂದವಳು. ಕೆಲಸ ನನ್ನ ಹಂಗೆ ಚೆನ್ನಾಗಿದೆ ನನ್ನಷ್ಟೇ ವರ್ಕ್
ಸ್ಟ್ರೆಸ್ ಅವ್ಳಗೂ ಪಾಪ. ಏನಕ್ಕೆ ಅಡಿಗೆ ಮಾಡ್ತಾಳೆ ಬಟ್ ಓವರ್ ಆಲ್ ಮನೆ ಚೆನ್ನಾಗೆ ನೋಡ್ಕೋತಾಳೆ,
ಅಮ್ಮಂಗೂ ಗೊತ್ತು, ಇಬ್ಬರ ಮಧ್ಯೆ ಮನಸ್ಥಾಪ ಏನ್ ಇರ್ಲಿಲ್ಲ ಆದರೂ ನಮ್ಮಮ್ಮ ಮುಂಚೆ ನೇ ಹೇಳಿದ್ಲು
"ಭಾಷೆ ಗೊತ್ತಿಲ್ದೆ ಇರೋವಾಗ ಅಡ್ಜಸ್ಟ್ ಆಗೋದ್ ಕಷ್ಟ, ನಿನ್ನ ಮದ್ವೆ ಆದ್ಮೇಲೆ ವಿವೇಕ್ ಜೊತೆ
ಇರ್ಬೇಕಾಗತ್ತೇನೋ" ಅಂತ.
ಅಂದ್ ಹಾಗೆ ವಿವೇಕ್
ನನ್ನ ಅಣ್ಣ, ನಮ್ಮಪ್ಪ ಹೋಗಿ ೫ ವರ್ಷ ಆಗಿತ್ತು ನಮ್ಮ ಅಣ್ಣನ ಮದ್ವೆ ಆಗಿ ೨ ತಿಂಗಳಲ್ಲೇ ಹೋದರು, ಆಗ
ಅಮ್ಮ ಅತ್ತೆ ಇಂದ ದೂರ ಇರಕ್ಕೆ ಶುರು ಮಾಡಿದ್ಲು ಅಂದರೆ ನನ್ನ ಮನೇಲಿ ಇರ್ತಿದ್ಲು ಸಿಂಗಲ್ ಬೆಡ್ ರೂಮ್
ಮನೆ ಆದರು ಅಡ್ಜಸ್ಟ್ ಮಾಡ್ಕೊಂಡಿದ್ಲು. ನನ್ನ ಮದ್ವೆ ಮೇಲೆ ಹೋಪ್ ಇತ್ತು, ಆದರೆ ನಮ್ಮ ಅಮ್ಮನ ಲೇಕ್ದಲ್ಲಿ
ನಡೀಲಿಲ್ಲ. ಹಾಗಾಗಿ ಬೇಜಾರ್ ಕಳಿಯಕ್ಕೆ ಅತ್ತೆ ಹತ್ರ ಕನ್ನಡದಲ್ಲಿ ಮಾತಾಡೋದೇ ಸರಿ ಅಂತ ಅಲ್ಲಿ ಅಣ್ಣನ
ಜೊತೇಲಿ ಇರವಳು. ಹೊಸ ಮದ್ವೆ ಆದ ನಮಗೂ ಅದು ಒಳ್ಳೇದ್ ಆಯಿತು.
_*_
ಒಹ್ ಎಷ್ಟ್ ದೊಡ್ಡದಿದೆ
ನನ್ನ ಜೀವನ ಅಂತ ಅಂಕೋಳೋ ಅಷ್ಟ್ರಲ್ಲಿ ಮನೆ ಬಂತು. ಈ ಹೊಸ ಮನೆ ವೈಬ್ಸ್ ಸರಿ ಇಲ್ಲ ಅಂತ ನಮ್ಮ ಇಬ್ಬರಿಗೂ
ಅನ್ಸಿತ್ತು ಈಗ ಕೋವಿಡ್ ಬಂದ್ ಮೇಲೆ ಪ್ರೋವ್ಆಯಿತು. ಪದ್ಮ ಹೇಳ್ತಾ ಇದ್ಲು ಈ ಮನೆ ನ decorate ಮಾಡಬೇಕು
ಅಂತ ನೇ ಅನ್ಸಲ್ಲ ಅಂತ, ಬಹುಶ ದೊಡ್ಡ ಮನೆ ಅಲ್ವಾ ಅದಕ್ಕೆ ಇರ್ಬೇಕು ಅಂತ ಹೇಳಿದ್ದೆ ನಂಗು ಅಷ್ಟಾಗಿ
ಇಷ್ಟ ಆಗಿರ್ಲಿಲ್ಲ, ಅವಳು ಕರೆಕ್ಟ್ ಆಗಿ ಹೇಳಿದ್ಲು, ಸ್ಟೈರ್ ಕೇಸ್ ಪಕ್ಕ ಲಿವಿಂಗ್ ರೂಮ್ ಇರೋದ್ರಿಂದ ಮೇಲೆ ಮನೆಗೆ ಹೋಗವಾಗ ನಮ್ಮ ಲಿವಿಂಗ್ ರೂಮ್ ಕಾಣತ್ತಲ್ಲ
ಒಂಥರಾ ಪ್ರೈವಸಿ ಇರಲ್ಲ ಕಿಟಕಿ ಓಪನ್ ಮಾಡಕ್ಕೆ, ಅಂದಿದ್ಲು ಅದು ಸರಿ ಅನ್ಸಿತ್ತು, ಆದರೆ ತುಂಬ ಪ್ರಶಾಂತ
ವದ ವಾತಾವರಣ ಅದಕ್ಕೆ ಶಿಫ್ಟ್ ಆದ್ವಿ.
ಗೇಟ್ ತಗಿತಾ
ಇದ್ದ ಹಾಗೆ ವಿವೇಕ್ ನ ಕಾರ್ ನಿಂತಿತ್ತು ಸ್ವಲ್ಪ ಸುರ್ಪ್ರೈಸ್ ಆಯಿತು. ಪದ್ಮ ಒಬ್ಳೆ ಇರತಾಳೆ ಅಂತ
ಅಮ್ಮನ್ನ ಬಿಟ್ಟು ಹೋಗಕ್ಕೆ ಬಂದಿರ್ ಬಹುದಾ ಅಂತ. ಇನ್ನೊಂದ್ ಯೋಚನೆ ಏನ್ ಅಂದ್ರೆ ಇವರು ಯಾರು ಹಾಸ್ಪಿಟಲ್
ಗೆ ಏನಕ್ಕೆ ಬಂದಿಲ್ಲ ಅಂತ. ಸ್ಟೈರ್ ಕೇಸ್ ಹತ್ಕೊಂಡು ಫಸ್ಟ್ ಫ್ಲೋರ್ ಗೆ ಹೋಗಿ ಲಿವಿಂಗ್ ರೂಮ್ ಗೆ
ಇಣುಕಿ ನೋಡ್'ಡೇ. ಇದೊಂದ್ ನೋಡೋದ್ ಬಾಕಿ ಇತ್ತು. ನನ್ನ ಫೋಟೋ ಗೆ ಹಾರ.
_*_
ವಿಷಯನ ಅರಗಿಸಿ
ಕೊಳ್ಳೋಕೆ ನಂಗೆ ಸ್ವಲ್ಪ ಟೈಮ್ ಬೇಕ್ ಆಯಿತು. ಅಲ್ಲೇ ಸ್ಟೈರ್ ಗ್ರಿಲ್ ಮೇಲೆ ವರಗಿ ನಿಂತೆ ಕಿಟಕಿ
ಇಂದ ನೋಡ್ತಾ ಇದ್ದೆ, ನಮ್ಮಣ್ಣ ಮತ್ತೆ ಅತ್ತಿಗೆ ಪದ್ಮ ಹತ್ರ ಮಾತಾಡ್ತಾ ಇದ್ರೂ. ಇದು ನಿಜಾನಾ, ಇಲ್ಲ
ಮಾತ್ರೆ ಮಂಪರು ಇನ್ನು ಇದ್ಯಾ ಅನ್ನೋದು ನನ್ನ ಯೋಚನೆ ಆಗಿತ್ತು. ನಾರ್ಮಲ್ ಆಗಿ ಇಂಥ situation ಅಲ್ಲಿ
ಕಿರ್ಚ್ಕೊಂಡ್ ಒಳಗ್ ಹೋಗ್ತಾ ಇದ್ದೆ ಅನ್ಸತ್ತೆ, ಕೋವಿಡ್ ಇಂದ ಆದ ನೋವು, ಸಾವಿಗೆ ಹತ್ರ ಆದಾಗ ಆದಂಥ
ಅನುಭವ ವಿಷಯನ ಸ್ವಲ್ಪ ಥರ್ಡ್ ಪರ್ಸನ್ ಪಾಯಿಂಟ್ ಆಫ್ ವ್ಯೂ ಇಂದ ನೋಡಕ್ಕೆ ಹೆಲ್ಪ್ ಆಯಿತು ಅನ್ಸತ್ತೆ,
ಇದೆಲ್ಲ ಆದರು ಮನಸಲ್ಲಿ ತಲ್ಲಣ ಇರ್ಲಿಲ್ಲ. ಪದ್ಮ ನ ಒಬ್ಸರ್ವ್ ಮಾಡ್ತಾ ಇದ್ದೆ ಅವಳ ಮುಖದಲ್ಲಿ ಸಹಜವಾದ
ನೋವು ಇತ್ತು ಆದ್ರೆ ಗಂಡನ್ ಕಳ್ಕೊಂಡ್ ಆಗ ಟಿವಿ ಲಿ ಹೆಂಡ್ತೀರ್ ಅಳೋದ್ ತೋರ್ಸ್ತಾರ್ ಅಲ್ಲ ಆಥರ ಅಳು
ಇರ್ಲಿಲ್ಲ. ನಮ್ಮಿಬ್ಬರ ನಡುವೆ ೨ ತಿಂಗಳಿಂದ ಆದಂಥ ಬಿರುಕು ಇದಕ್ಕೆ ಕಾರಣ ಇರ ಬಹುದಾ ಅನ್ಕೊಂಡೆ ಬಟ್
ಇನ್ನೊಂದ್ ಕಡೆ ಅವಳನ್ನ ತುಂಬ judge ಮಾಡ್ತಾ ಇದಿನ ಅನ್ಸ್ತು.
ಆದರೂ ಯಾರಾದ್ರೂ
ಗುರ್ತು ಹಿಡಿಯ ಬೇಕಿತ್ತಲ್ಲ ಅನ್ಕೊಂಡೆ, ಬಟ್ ಮಾಸ್ಕ ಹಾಕೊಂಡಾಗ ಯಾರು ತಲೆ ಕೆಡಿಸ್ಕೊತಾರೆ, ಮೊದಲೇ
ಸೈಲೆಂಟ್ ಏರಿಯಾ, ಕೋವಿಡ್ ಬೇರೆ ಅವರ ಪಾಡಿಗೆ ಅವರು ಇರ್ತರೆ ಅನ್ಕೊಂಡೆ, ಸಡನ್ ಆಗಿ ಮನೆ ಒಳಗ್ ಹೋಗಿ,
'I am alive ' ಅಂತ ಹೇಳೋದ್ ನಂಗೆ ಸಮಂಜಸ ಅನ್ನಿಸ್ತಾ ಇರ್ಲಿಲ್ಲ.
ಹಂಗೆ ಮೆಲ್ಕ್
ಹಾಕ್ ನೋಡ್ದೆ, ಬ್ರದರ್ ಅವ್ಯಹಾರ ಅಂತ ಹೇಳಿದ್ದು, ಅವತ್ತು ಅಲ್ಲಿನ ವಾತಾವರಣ ಎಲ್ಲ ಈಗ ಕನೆಕ್ಟ್
ಆಗ್ತಾ ಇತ್ತು, ಅನ್ಕೋತ ಇದ್ದೆ ppe kit ಹಾಕೊಂಡ್ ಬರವರು ಯಾರು ಅಂತ ನೇ ಗೊತ್ತಿಲ್ಲ ನೆನ್ನೆ ಟ್ರೀಟ್
ಮಾಡಕ್ಕೆ ಬಂದವರು ಇವರೇನಾ ಅನ್ನೋ ಪ್ರಶ್ನೆ ಅಲ್ಲಿ ಎಲ್ಲರಿಗು ಇರ್ತಿತ್ತು. ಈಗ ಎಲ್ಲ ಕನೆಕ್ಟ್ ಆಯಿತು.
ಶವಗಳು ರಿಪ್ಲೇಸ್ ಆಗಿತ್ತು ಅಂತ ಕೇಳಿದ್ದೆ ಹೀಗ್ ಕೂಡ ಆಗ್ ಬಹುದು ಅಂತ ಇವತ್ತು ಗೊತ್ತಾಯಿತು.
ಅಲ್ಲಿ ಅಮ್ಮ
ಇರ್ಲಿಲ್ಲ ಇದ್ದಿದ್ರೆ ವಾತಾವರಣ ನೇ ಬೇರೆ ಇರೋದು ಅನ್ಸತ್ತೆ, ಯಾರು ಬಿಕ್ಕಿ ಬಿಕ್ಕಿ ಅಳ್ತಾ ಇರ್ಲಿಲ್ಲ,
ನನ್ನ ಡೆತ್ ಇಷ್ಟು ಸಿಂಪಲ್ ಅಹ್ ಅನ್ಸ್ತು, ಏನ್ ಕರಣ ಇಷ್ಟು ಕ್ಯಾಶುಯಲ್ ಆಗಿ ತೊಗೊಳಕ್ಕೆ ಅನ್ನೋ
ಪ್ರಶ್ನೆ ನನ್ನಲ್ಲಿ. ಇಲ್ಲ ಇವರಿಗೆ ಸುದ್ದಿ ಬಂದು ೨ ೩ ದಿನ ಆಗಿರ್ಬೇಕು ಅನ್ಕೊಂಡೆ. ಅಪ್ಪ ಹೋದಾಗ
ಮನೇಲಿ ಹೇಗ್ ಇತ್ತು ಅಂತ ನೆನಪಿಸ್ಕೊಂಡೆ, ಒಂಥರಾ vaccum ಇರ್ತಿತ್ತು ಮನೆ ನಲ್ಲಿ ಆದ್ರೆ ನಾವ್ ಏನ್
ಅಳ್ತಾ ಇರ್ಲಿಲ್ಲ ೨ ದಿನ ರಾಜ ತೊಗೊಂಡ್ ಆಫೀಸ್ ಕೆಲಸ ಶುರು ಮಾಡಿದ್ವಿ ಅಮ್ಮ ಒಂದ್ ವಾರ್ಡ್ ತನಕ ಅಳ್ತಿದ್ಳು
ಅಷ್ಟೇ. ವಿಷಯ ಹೀಗ್ ಇರ್ಬಹುದು ಅನ್ಕೊಂಡೆ. ಒಳಗ್ ಹೋಗಿ ಡ್ರಾಮಾ create ಮಾಡೋ ಮೂಡ್ ಇರ್ಲಿಲ್ಲ.
ಸತ್ತ್ ಮೇಲೆ ಪ್ರಪಂಚ ಹೇಗ್ ಇರತ್ತೆ ಅಂತ ಎಲ್ಲಾರ್ ಪ್ರಶ್ನೆ ಅಲ್ವಾ, ಹೆಂಗು ಮಾಸ್ಕ ಇದ್ರೆ ಯಾರಿಗೂ
ಗೊತ್ತಾಗಲ್ಲ, ಇವರ್ಯಾರು ಅಷ್ಟು ಅಳ್ತಾ ಇಲ್ಲ ಅರ್ಜೆಂಟ್ ಏನಕ್ಕೆ ಅಂತ ಅಲ್ಲಿಂದ ಹೊರಟೆ.
ಮೊಬೈಲ್ ನನ್ನ
ಕೈ ಅಲ್ಲಿ ಇದ್ದಿದ್ರೆ ಅಣ್ಣನಿಗೆ ಹೇಳ್ ಬಹುದಿತ್ತು ಅನ್ಸ್ತು ಆದರೆ ಮೊಬೈಲ್ ಕೈ ಅಲ್ಲಿ ಇದ್ದಿದ್ರೆ
ಇಷ್ಟೆಲ್ಲಾ ಆಗ್ತಾ ನೇ ಇರ್ಲಿಲ್ಲ ಅಲ್ವಾ, ಅವತ್ತು ಅಡ್ಮಿಟ್ ಆದ ೨ ನೇ ದಿನ ಎಲ್ಲಾರ್ ಗುಡ್ ವಿಶೇಸ್
ಮೆಸೇಜ್ ನೋಡಿ ನೋಡಿ ಬೇಜಾರ್ ಆಗಿತ್ತು ಅದಕ್ಕೆ ಮೊಬೈಲ್ ಇಟ್ಕೋಳೋದೆ ಬೇಡ ಅನ್ಕೊಂಡೆ. ಈಗ ಅನ್ನಿಸ್ತಾ
ಇದೆ they just tried to do their bit ಅಲ್ವಾ. ನರ್ಸ್ ಗೆ ಸುಳ್ಳು ಹೇಳಿ ಪರ್ಸ್ ನಾನೇ ಇಟ್ಕೊಂಡ್
ಮೊಬೈಲ್ಪ ಪದ್ಮ ಕೈಗೆ ಕೊಡ್ಸದೇ.
ಎರಡ್ ದಿನ ಆದ್ಮೇಲೆ
ಸುದ್ದಿ ಮುಟ್ಟಿಸಣ ಈಗ ಹೀಗೆ ಇರಲಿ ಅಂತ ಅನ್ಸ್ತು, ಫ್ರೆಂಡ್ ಜಗ್ಗ ಮನೆಗೆ ಹೋಗಣ ಅಂತ ಅಲ್ಲಿಂದ ಹೊರಟೆ,
ಈ ಸಲ ಸ್ಟೈರ್ ಕೇಸ್ ಇಂದ ನಿಧಾನವಾಗಿ ಇಳ್ದೆ ಯಾರಿಗೂ ಗೊತ್ತಾಗ್ದೇ ಇರೋ ಹಾಗೆ. ಕೆಳಗೆ ಬಂದು ಜಗ್ಗನ
ಮನೆಗೆ ಹೋಗಕ್ಕೆ ಆಟೋ ಹಿಡ್ದೆ.
_*_
ಆದರು ನನ್ನ ಡೆತ್
ನ ಇಷ್ಟು ಸಿಂಪಲ್ ಆಗಿ ತೊಗೊತಾರೆ ಅನ್ಕೊಂಡಿರ್ಲಿಲ್ಲ, anyway another reason to take life
lightly ಅನ್ಕೊಂಡೆ. ಬಹುಶ ನಾನು ಮಾಡ್ಕೊಂಡ್ ಬಂದಿರೋ ಚಾಯ್ಸ್ ಇಂದ ಅನ್ಸತ್ತೆ, ಲವ್ ಮ್ಯಾರೇಜ್ ಆದ್ರೆ
ಫ್ಯಾಮಿಲಿ ಇಂದ ದೂರ ಆಗೋದು ಕಾಮನ್ ಅಲ್ವಾ. ಅದರ ಮೇಲೆ ಕೋವಿಡ್ ಬೆರೆ ಯಾರು ಮನೆಗೆ ಬಂದಿರಲ್ಲ. ಫ್ರೆಂಡ್ಸ್
ಇಂದ ನು ಜಾಸ್ತಿ expect ಮಾಡಕ್ಕಾಗಲ್ಲ ಬಿಡು ಅನ್ಸ್ತು.
ಆಟೋದಲ್ಲಿ ಕೂತಾಗ
ಯೋಚನೆ ಗಳು ಜಾಸ್ತಿ ಅನ್ಸತ್ತೆ, ಆದರೂ ಅವಳ ಮುಖದಲ್ಲಿ ಇನ್ನು ಸ್ವಲ್ಪ ದುಃಖ ಇರ್ಬೇಕಿತ್ತು ಅನ್ಸ್ತು.
ಜಗ್ಗ ಮತ್ತೆ ಫ್ರೆಂಡ್ಸ್ ಹೇಳಿದ್ದು ನೆನ್ಪ್ ಆಗ್ತಾ ಇತ್ತು 'ಬರಿ ಇನ್ಸ್ಟಾಗ್ರಾಮ್ ಎಲ್ಲ ನೋಡಿ ಮದ್ವೆ
ಆಗ್ಬೇಡ' ಅಂದಿದ್ದು, ನಾನು ಅದಕ್ಕೆ ನನ್ನ ಎಸ್ಪ್ಲನೇಶನ್ ಕೊಟ್ಟಿದ್ದೆ 'ಇಲ್ಲ ನಾವಿಬ್ರು ಒಳ್ಳೆ ಪೇರ್
ಆಗ್ತಿವಿ ನಮ್ಮ ಮಧ್ಯ ಡಲ್ ಮೊಮೆಂಟ್ಸ್ ಇರೋದೇ ಇಲ್ಲ' ಅಂತ. ಅದು ನಿಜಾನೆ ಆದರೆ ಹಿಂಗ್ ಏನಕ್ಕೆ ಆಯಿತು.
ಇದನ್ನ ಯೋಚನೆ
ಮಾಡ್ಕೊಂಡ್ ಇದ್ರೆ ಉಪಯೋಗ ಇಲ್ಲ ಜಗ್ಗನಿಗೆ ನಾನು ಬರ್ತಿರೋ ವಿಷಯ ಹೇಳನ ಅನ್ಕೊಂಡೆ, ಫೋನ್ ಗೆ ಆಟೋ
ಡ್ರೈವರ್ ನ ಕೇಳ್ದೆ, "ಸರ್ ಸ್ವಲ್ಪ ಫೋನ್ ಕೊಡ್ತೀರಾ", "ಯಾಕ್ ಸರ್ ನಿಮ್ ಹತ್ರ
ಇಲ್ವಾ" ಅಂದ ಡ್ರೈವರ್. "ಇಲ್ಲ ಸರ್ ಮನೇಲ್ ಬಿಟ್ ಬಂದೆ" ಅಂದೇ, ಜೆಬ್ ಇಂದ ತಗೆದು
ಕೊಟ್ಟ "ಕೊರೊನ ಅಲ್ವಾ ಸರ್ ಅದಕ್ಕೆ ಭಯ" ಅಂತ ಹೇಳ್ ಕೊಟ್ಟ.
ಹಿಂಗೇ ಫೋನ್
ಮಾಡಿ ನಾನು ಬದುಕಿದಿನಿ ಅಂದ್ರೆ ಆಟೋದವನು ಏನ್ ಅನ್ಕೋತಾನೆ ಅನ್ಸ್ತು ಅದಕ್ಕೆ ಜಗ್ಗನ ನಂಬರ್ ಗೆ ಸೈಲೆಂಟ್
ಆಗಿ ಮೆಸೇಜ್ ಮಾಡ್ದೆ. ಕೋವಿಡ್ ಸೆಂಟರ್ ಅಲ್ಲಿ ಆದ ಅವ್ಯವಹಾರ ದಿಂದ ನಾನು ಸತ್ತೇ ಅಂತ ಸುದ್ದಿ ಬಂದಿರ್
ಬಹುದು ಬಟ್ that is not true ಅಂತ, ನಿನ್ನ ಮನೆಗೆ ಬರ್ತಾ ಇದೀನಿ ಬಂದ್ ಎಲ್ಲ ಹೇಳ್ತಿನಿ ಅಂತ.
ಆಟೋ ದವನು 'ಸರ್ ಕಾಲ್ ಮಾಡಿಲ್ವಾ, ನಂಬರ್ ಗೊತ್ತಿಲ್ವ' ಇಲ್ಲ ಫೋನ್ ಪಿಕ್ ಮಾಡ್ತಾ ಇಲ್ಲ ಫೋನ್ ಬರ್ಬಹುದು
ಅಂತ ಅವನ ಕೈಗೆ ಮತ್ತೆ ಫೋನ್ ಕೊಟ್ಟೆ. ೫ ನಿಮಷದಲ್ಲಿ ಕಾಲ್ ಬಂತು, ಆಟೋ ದವನು 'ಸರ್ ನಿಮ್ ನಂಬರ್
ಇರ್ಬೇಕು' ಅಂತ ಫೋನ್ ನನ್ನ ಕೈಗೆ ಕೊಟ್ಟ.
ಜಗ್ಗನ ಜೊತೆ
ಬರಿ ೨ ನಿಮಿಷ ಮಾತಾಡ್'ದೆ ಅನ್ಸತ್ತೆ, ನಿಜ ಹೇಳ್ಬೇಕು ಅಂದ್ರೆ ನಂಗೆ ಜೀವ ಇದೆ ಅನ್ಸಿದ್ದು ಅವನ್
ಜೊತೆ ಮಾತಾಡಿದ್ ಮೇಲೇನೆ. ಪದ್ಮ ಗೆ ತಿಳಿಸದೆ ಅವನ್ ಗೆ ಈ ವಿಷಯ ಏನಕ್ಕೆ ಹೇಳ್ತಾ ಇದೀನಿ ಅಂತೆ ಪ್ರಶ್ನೆ
ಮಾಡಿ ಬಹುದು ಅನ್ಕೊಂಡೆ ಆದ್ರೆ ಅವನಿಗೆ ನಿಮ್ಮಿಬ್ಬರ ಬಗ್ಗೆ ಮುಂಚೆ ನೇ ಸ್ವಲ್ಪ ಗೊತ್ತಿತ್ತು ಅದಕ್ಕೆ
ಕೇಳಿಲ್ಲ ಅನ್ಸತ್ತೆ ಆದರೆ ಪದ್ಮ ನಾನು ತೀರ್ಕೊಂಡ್ ವಿಷಯ ಕೇಳಿ ಬ್ರೇಕ್ ಡೌನ್ ಆಗಿದ್ದು ಎಲ್ಲ ಹೇಳ್ದ,
ಅವನಿಗೆ ಈಗ್ಲೂ ನಂಬಿಕೆ ಬರ್ತಾ ಇಲ್ಲ ಯಾರೋ ಸ್ಕ್ಯಾಮ್ ಮಾಡ್ತಾ ಇರ್ಬಹುದು ಇನ್ನು ಅಂತ ಅವನ ನಂಬಿಕೆ
ನಾನು ಅಲ್ಲಿಗೆ ಬಂದ್ ಮೇಲೆ ನೇ ನಂಬೋದು ಅಂದ.
_*_
ಜಗದೀಶ್ ನ ಮನೆ
bachelors paradise ಅನ್ಬಹುದು. ೧೦ ಫ್ಲೋರ್ ನಲ್ಲಿ ಮನೆ. ಬಾಲ್ಕನಿ ಇಂದ ನೈಸ್ ರೋಡ್ ವಿಶಾಲ್ ವಾಗಿ
ಕಾಣುತ್ತ ಇತ್ತು. ಅಲ್ಲಿ ರೀಚ್ ಆದಾಗ ೮.೩ ೮.೪೫ ಆಗಿತ್ತು. ಸೆಕ್ಯೂರಿಟಿ ಗೇಟ್ ಹತ್ರ ನೇ ನಿಂತಿದ್ದ.
ಅಲ್ಲಿ ರೀಚ್ ಆಗ್ತಾ ಇದ್ದ ಹಾಗೆ ಪವಾಡ ಪುರುಷ ಅಂತ ಕರ್ದ ನನ್ನನ್ನ. ಸೆಕ್ಯೂರಿಟಿ ಹತ್ರ ಎಂಟ್ರಿ ಮಾಡಿ
ಟೆಂಪರೇಚರ್ ಚೆಕ್ ಮಾಡ್ತಾ ಇರುವಾಗ "ಅವರು ಕೊರೊನ ನ ಗೆದ್ದು ಬಂದವರು" ಅಂತ ಒಂದ್ ಮಾತು
ಹೇಳ್ದ, ವಾಚ್ಮ್ಯಾನ್ ಕನ್ನಡದವನಲ್ಲ ಅನ್ಸತ್ತೆ ಸುಮ್ನೆ ನಕ್ದ.
ಮನೆ ಒಳಗ್ ಹೋಗ್ತಿದ್ದಂಗೆ
"ಕಾಫಿ ಮಾಡ್ತೀನಿ ತಾಳು" ಅಂದ. ಸಂಜೆ ೬ ಕ್ಕೆ ಬೇಕಿದ್ದ ಕಾಫಿ ಈಗ ಸಿಕ್ತು. ಬಾಲ್ಕನಿ
ಹತ್ರ ನಾನು ನಿಂತಿದ್ದೆ ಅವನು ಕಾಫಿ ತಂದು ಕೊಟ್ಟು ಮಾತು ಶುರು ಮಾಡ್ದ್ವಿ. ಕೋವಿಡ್ ಸೆಂಟರ್ ನಲ್ಲಿ
ಆದ್ ಅವ್ಯಹಾರ, ನಂಗೆ ಆ ಎರಡ್ ದಿನ ಸೆಂಟರ್ ನಲ್ಲಿ ಕಂಡಿದ್ ನಾಟಕೀಯ ಬೆಳವಣಿಗೆ, ಪದ್ಮ ತನ್ನ ವಾಟ್ಸಪ್ಪ್
ನಲ್ಲಿ ಹೆಲ್ಪ್ ಕೇಳಿದ್ದು, ಎಲ್ಲರು ಆ ಟೈಮ್ ಅಲ್ಲಿ ಅಸಹಾಯಕರಾಗಿದ್ದು ಎಲ್ಲ ಮಾತಾಡಿದ್ವಿ, ಅಷ್ಟ್ರಲ್ಲಿ
ಗಂಟೆ ೧೦ ಆಗಿತ್ತು. "ಊಟಕ್ಕೆ ರೆಡಿ ಮಾಡ್ತೀನಿ" ಅಂದ ಅಬ್ರಪ್ಟ್ ಆಗಿ. ಏನೋ ಕೇಳ್ಬೇಕು
ಅನ್ಕೊಂಡ್ ಸುಮ್ನೆ ಆಗಿರೋ ಥರ ಇತ್ತು, ಏನ್ ಇರ್ಬಹುದು ಅಂತ ನಂಗೆ ಗೊತ್ತಿತ್ತು ಆದರೆ ನಾನು ಕೆಳಕ್ಕೆ
ಹೋಗಿಲ್ಲ. ಪದ್ಮ ಪಟ್ಟಿದ್ ಕಷ್ಟ ಕೇಳಿ ಒಂದ್ ಕಡೆ ಬೇಜಾರ್ ಆಯಿತು ಇನ್ನೊಂದ್ ಕಡೆ ಸಮಾಧಾನ ಆಯಿತು.
ಊಟ ಮಾಡ್ಬೇಕಿದ್ರೆ
ಒಂದ್ ಸೈಲೆನ್ಸ್ ಇತ್ತು ಅದಕ್ಕೆ ನಾನೇ ಕೇಳ್ದೆ, "ಏನೋ ಕೇಳ್ಬೇಕು ಅಂತಿದ್ಯ ಅನ್ಸತ್ತೆ ಏನು"
ಅಂದೇ, ಆಗ ಕೇಳ್ದ "ಬ್ರೋ ಏನ್ ಆಗ್ತಾ ಇದೆ ನಿನ್ನ ಪದ್ಮ ಮಧ್ಯೆ, ಈ ವಿಷಯ ಕೇಳಿ ಅವಳು ಹೇಗ್
ರಿಯಾಕ್ಟ್ಬ ಮಾಡಬಹುದು ಅಂತ ಕ್ಲೂ ಇದ್ಯಾ ನಿಂಗೆ,
ಬಟ್ ನೀನು ಇನ್ನು ಹೇಳಿಲ್ಲ ಅನ್ಸತ್ತೆ" ಅಂದ, "ನೀವೆಲ್ಲ ಹೇಳ್ತಿದ್ದಿದ್ದು ನಿಜ ಅನ್ಸತ್ತೆ,
ಒಂಥರಾ ಲ್ಯಾಂಗ್ವೇಜ್ ಬ್ಯಾರಿಯರ್ ಅನ್ಸತ್ತೆ ಸುಮ್ನೆ ಇನ್ಸ್ಟಾಗ್ರಾಮ್ ನೋಡ್ಕೊಂಡ್ ಮದ್ವೆ ಆಗ್ ಬಾರ್ದಿತ್ತು"
ಅಂದೇ, ಅದಕ್ಕೆ ಅವನು "ಇಲ್ವೋ ನೀವಿಬ್ರು ಚೆನ್ನಾಗೆ ಇದ್ರಿ, there should be
something else" ಅಂದ, "ಡಿಫರೆನ್ಸ್ ಹೆಂಗೋ ಜಾಸ್ತಿ ಆಯಿತು ಅನ್ಸತ್ತೆ ಇವತ್ತು ಅವಳ
ಮುಖದಲ್ಲಿ ಅಷ್ಟು ದುಃಖ ಇರ್ಲಿಲ್ಲ" ಅಂದೇ. "ಮನೆಗ್ ಹೋಗಿದ್ಯಾ" ಅಂದ ಆಶ್ಚರ್ಯದಲ್ಲಿ.
"ಹೌದು ಆಗ್ಲೇ ಗೊತ್ತಾಗಿದ್ದು ಇದೆಲ್ಲ" ಅಂದೇ. ಅವನ ಮುಖದಲ್ಲಿ ನಾನು ಕೊಟ್ಟಿದ್ ಆನ್ಸರ್
ಸಮಾಧಾನ ತಂದಿಲ್ಲ "ಸರಿ ಮಗ take your time " ಅಂದ.
_*_
ಊಟ ಮಾಡಿ ಜಗ್ಗ
ಮೊದಲು ಎದ್ದು ಬಾಲ್ಕನಿ ಹತ್ರ ಸಿಗರೆಟ್ ಹಚ್ಚಿ ನಿಂತ್ಕೊಂಡ. "ಸಿಗರೆಟ್, ರಾಕೆಟ್, ಪಟಾಕಿ,
ಗಾಂಜಾ ಇನ್ನೇನೆನ್ ಹಚ್ಚಿಲ್ಲ ಈ ಬಾಲ್ಕನಿ ಅಲ್ಲಿ" ಅಂದೇ, "ಬೇಕಾ" ಅಂತ ಕೇಳ್ದ
"ಇಲ್ಲ I am feeling light only " ಅಂದೇ "ಆದರು ಎಲ್ಲ ಹೇಳ್ಕೊತಾ ಇಲ್ವಲ್ಲಪ್ಪ"
ಅಂದ, ೨ ನಿಮಿಷ ಸುಮ್ನೆ ಇದ್ದು ಬಾಯಿ ಬಿಟ್ಟೆ "ಎಲ್ಲದಕ್ಕೂ ಒಂದ್ ರೀಸನ್ ಇದೆ" ಅಂದೇ,
"ಏನದು" ಅಂದ ಜಗ್ಗ. "೩, ೪ ತಿಂಗಳ ಹಿಂದೆ ಮಗು ಮಾಡ್ಕೊಳನ ಅಂತ ಟ್ರೈ ಮಾಡ್ತಾ ಇದ್ವಿ,
ಎರಡ್ ತಿಂಗ್ಳು ನೋಡಿದ್ವಿ ಅವಳ ಪಿರೇಡ್ಸ್ ಏನ್ ಮಿಸ್ ಆಗಿಲ್ಲ ಅಂತ ಬೇಜಾರ್ ಅಲ್ಲಿ ಇದ್ಲು, ಡೋಂಟ್
ವರಿ ಡಾಕ್ಟರ್ ಹತ್ರ ಹೋಗಣ ಅಂದೇ, "I think, I do
not have ಪ್ರಾಬ್ಲಮ್, I had
conceived before you know right" ಅಂತ ಜೋರಾಗಿ ಅತ್ತಳು" ಅಂದೇ. "ಅಲ್ಲಿಂದ
ಮಾತು ಕಡಿಮೆ ಮಾಡಿದ್ರ" ಅಂದ ಜಗ್ಗ, ಹೌದು ಅಂದೇ. "ಇದೆ ಅನ್ಸತ್ತೆ ನಿಮ್ ಪ್ರಾಬ್ಲಮ್
ಅದನ್ನ ಬಿಟ್ಟು ಲ್ಯಾಂಗ್ವೇಜ್ ಗ್ಯಾಪ್ ಅಂತ ಏನೋ ಅನ್ಕೋ ಬೇಡ" ಅಂದ. ನಾನು ಸುಮ್ನೆ ಇದ್ದೆ.
"ಮಾತಾಡ್ಕೊ ಬೇಕೋ ಎಲ್ಲ, ಹೀಗೇ ಸುಮ್ನೆ ಇದ್ರೆ ಒಂದಕ್ಕೊಂಡ್ ಬೆಳಿತಾ ಹೋಗತ್ತೆ, ನೀನು ಆಸ್ಪತ್ರೆ
ಲಿ ಇದ್ದಾಗ ತುಂಬ ಕಷ್ಟ ಪಟ್ಟಿದ್ಲು, ನಿಜ ಹೇಳ್ಬೇಕು ಅಂದ್ರೆ ನಿಮ್ಮಣ್ಣ ನು ಅಷ್ಟ ಕಷ್ಟ ಪಟ್ಟಿಲ್ಲ
ಅನ್ಸತ್ತೆ" ಅಂದ. ಅವನು ಹೇಳಿದ್ದಕ್ಕೆ ನನ್ನ ಹತ್ರ ಏನು ಉತ್ತರ ಇರ್ಲಿಲ್ಲ "ಈಗಾದ್ರೂ
ಮಾತಾಡ್ಸು" ಅಂದ. "ಮನೆಗೆ ಹೋಗ್ದೆ ಇಲ್ಲಿಗೆ ಬಂದೆ ಅಂದ್ರೆ ಇನ್ನು ಬೇಜಾರ್ ಮಾಡ್ಕೊತಾಳಲ್ಲ"
ಅಂದೇ. "ಆಗಿದ್ ಆಯಿತು, ಇನ್ನು ಡಿಲೇ ಮಾಡ್ಬೇಡ ಅಂದ".
_*_
ನಂಗೆ ಆ ರಾತ್ರಿ
ನಿದ್ದೆ ಸರೀಗ್ ಬಂದಿಲ್ಲ, ಬೆಳಗ್ಗೆ ಜಗ್ಗ ನ ಆಫೀಸ್ ಕಾಲ್ ಅಲ್ಲಿ ಮಾತಾಡಕ್ಕೆ ಸ್ಟಾರ್ಟ್ ಮಾಡಿದಾಗ
ಎಚ್ಚರ ಆಯಿತು. ಯಾವಾಗ ನಿದ್ದೆ ಬಂತು ಅಂತ ಗೊತ್ತಾಗಿಲ್ಲ. ಎದ್ದು ಸ್ನಾನಕ್ಕೆ ಹೋದೆ. ಬಂದ್ ತಕ್ಷಣ
ಜಗ್ಗ ಗೆ ಹೇಳ್ದೆ "ನಾನು ಮನೆಗ್ ಹೋಗ್ತೀನಿ" ಅಂತ "ವೆರಿ ಗುಡ್" ಅಂದ.
ಒಂದ್
bouquet ತೊಗೊಂಡ್ ಮನೆಗ್ ಹೋದೆ ನಂಗೆ ಪದ್ಮ ಹೆಂಗ್ ರಿಯಾಕ್ಟ್ ಮಾಡ್'ದ್ಲು ನಾನ್ ಹೆಂಗ್ ರಿಯಾಕ್ಟ್
ಅನ್ನೋದು ಎಕ್ಸ್ಪ್ರೆಸ್ ಮಾಡಕ್ಕೆ ಆಗಲ್ಲ, ನನ್ನ ಡೆತ್ ನ ನಾನೇ ನೋಡೋದು ದೊಡ್ ವಿಷಯ ಅನ್ಕೊಂಡೆ, ಅವತ್ತು
ಅವಳು ಅತ್ತಿದ್ದು ನಕ್ಕಿದ್ದು ನಾನು ಮುಂಚೆ ಟಿವಿ ಲು ನೋಡಿಲ್ಲ ಯಾರಲ್ಲ ನೋಡಿಲ್ಲ. ನಮಗೆ ಅಂತ ಅಳವರು
ನಾಗವರು ಇದ್ರೆ ಚೆನ್ನಾಗಿರತ್ತೆ ಅನ್ಸ್ತು, ಈಗ ಸ್ವಲ್ಪ ಮುಂಚೆ ಎಲ್ಲ ಬಿಡಕ್ಕೆ ರೆಡಿ ಆದವನಿಗೆ ಈಗ
ಹೀಗೆ ಅನುಭವ ಆಗ ಬಹುದಾ ಅನ್ಕೋತ ಇದ್ದೆ. ಆದರೆ change is life ಅಲ್ವಾ.
ಅಂದ್ ಹಾಗೆ ಒಂದ್
ವಿಷಯ ಹೇಳ್ಬೇಕು, ಪದ್ಮ ಗೆ ಆಫೀಸ್ ಕಡೆ ಇಂದ ನಮ್ಮ ಮ್ಯಾನೇಜರ್ ಕಾಲ್ ಮಾಡಿದ್ರು ಸ್ವಲ್ಪ ಕನ್ಸೋಲ್
ಮಾಡಕ್ಕೆ. ಎಲ್ಲ ತಿಳ್ಸಿ ಮಾತಾಡದ್ ಮೇಲೆ ಅವರು ಒಂದ್ ಮಾತು ಹೇಳಿದ್ರು "Vedanth do you
know something the out of office mail you set actually ends today"
Nagabhushan R Anvekar